ಬೆಂಗಳೂರು, ನ.29- ಹಸುಗೂಸು ಮಾರಾಟ ದಂಧೆ ಬಗ್ಗೆ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮಹಿಳಾ ಏಜೆಂಟ್ ಹಾಗೂ ನಕಲಿ ವೈದ್ಯನೊಬ್ಬನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಏಜೆಂಟ್ ಆಗಿದ್ದ ರಮ್ಯಾಳನ್ನು ಹೆಬ್ಬಾಳದಲ್ಲಿ ಹಾಗೂ ನಕಲಿ ವೈದ್ಯನೊಬ್ಬನನ್ನು ರಾಜಾಜಿನಗರದಲ್ಲಿ ಬಂಸಲಾಗಿದೆ. ಈಗ ಈ ಪ್ರಕರಣದಲ್ಲಿ ಬಂತರ ಸಂಖ್ಯೆ 10ಕ್ಕೇರಿದೆ.
ಶಿಶು ಮಾರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬಂತರಾಗಿರುವ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಅನೇಕ ವಿಚಾರಗಳು ಬಯಲಾಗುತ್ತಿವೆ. ರಮ್ಯಾ ಸಂಬಂ ಯುವತಿಯೊಬ್ಬರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರಿಂದ ಆಕೆ ಅಬಾಷನ್ಗೆ ಓಡಾಡುತ್ತಿದ್ದಾಗ ಆಕೆಯನ್ನು ಒಂಭತ್ತು ತಿಂಗಳು ರಮ್ಯಾ ಆರೈಕೆ ಮಾಡಿ ಮಗುವನ್ನು ಪಡೆದುಕೊಂಡಿದ್ದಳು. ಬಳಿಕ ಇದೇ ಗ್ಯಾಂಗ್ ಜೊತೆ ಸೇರಿ ಆ ಶಿಶುವನ್ನು ಮಾರಾಟ ಮಾಡಿದ್ದಳು.
ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಸಮ್ಮತಿ : ಡಿಕೆಶಿ ಸದ್ಯನಿರಾಳ
ಮಗು ಹೆತ್ತುಕೊಟ್ಟಿದ್ದ ಸಂಬಂ ಯುವತಿಗೆ ರಮ್ಯಾ ಹಣ ನೀಡಿ ನಂತರ ಹೊಸ ವರನನ್ನು ನೋಡಿ ಆ ಯುವತಿಗೆ ಮದುವೆ ಕೂಡ ಮಾಡಿಸಿದ್ದಾಳೆ.ಈಗಾಗಲೇ ಹಸುಗೂಸು ಮಾರಾಟ ಪ್ರಕರಣದಲ್ಲಿ ಬಂತರಾಗಿರುವ ಆರೋಪಿಗಳು ರಮ್ಯಾ ಹೆಸರು ಬಾಯ್ಬಿಟ್ಟಿದ್ದರು. ಆ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹೆಬ್ಬಾಳದಲ್ಲಿ ರಮ್ಯಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಮೊದಲು ಬಂತರಾದ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಹಲವು ಮಾಹಿತಿಗಳು ಹಾಗೂ ಹೆಸರನ್ನು ಬಾಯ್ಬಿಟ್ಟಿದ್ದರು. ಇವರ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಸಲಾಗಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ಈಗ ಹತ್ತು ಮಂದಿ ಖಾಕಿ ಬಲೆಗೆ ಬಿದ್ದಿದ್ದಾರೆ.
ನಕಲಿ ವೈದ್ಯ ಆರೆಸ್ಟ್:
ಎಂಬಿಬಿಎಸ್ ಉತ್ತೀರ್ಣ ಆಗದಿದ್ದರೂ ರಾಜಾಜಿನಗರದಲ್ಲಿ ಕ್ಲೀನಿಕ್ ನಡೆಸುತ್ತಿದ್ದ ನಕಲಿ ವೈದ್ಯನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಈ ನಕಲಿ ವೈದ್ಯ ಕ್ಲೀನಿಕ್ನಲ್ಲಿ ತನ್ನ ಹೆಸರು ಹಾಕಿಕೊಂಡಿದ್ದಲ್ಲದೆ, ರೋಗಿಗಳಿಗೆ ಟ್ರೀಟ್ಮೆಂಟ್ ಕೊಡುತ್ತಿದ್ದನು.ಹಸುಗೂಸು ಮಾರಾಟಕ್ಕೆ ದಾಖಲೆಗಳನ್ನು ಮಾಡಿಕೊಡುತ್ತಿದ್ದ ಹಾಗೂ ಜನ್ಮದಾಖಲೆ ಸೇರಿ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಡುತ್ತಿದ್ದ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಲಭ್ಯವಾದ ಮಾಹಿತಿ ಮೇರೆ ಇದೀಗ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ದೇವಸ್ಥಾನದ ಬಳಿ ತಮಿಳುನಾಡು ಮೂಲದವರು ಒಂದು ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ದೇವಸ್ಥಾನದ ಬಳಿ ನಿಂತಿದ್ದ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ಪರಿಶೀಲಿಸಿ ಕಾರಿನಲ್ಲಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 20 ದಿನದ ಗಂಡು ಮಗುವನ್ನು ರಕ್ಷಿಸಿದ್ದರು.