ಬೆಂಗಳೂರು,ಅ.7- ಖಾಸಗಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನವನ್ನಿಟ್ಟು ಬರೋಬ್ಬರಿ 39 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಆರೋಪಿಗಾಗಿ ಅಶೋಕ ನಗರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ. ನಗರದ ಖಾಸಗಿ ಬ್ಯಾಂಕೊಂದರಲ್ಲಿ ಕಳೆದ ಮೇ.25ರಂದು ವ್ಯಕ್ತಿಯೊಬ್ಬ 3 ಪದರಗಳ ಒಂದು ಕೆಜಿ ಚಿನ್ನ ಲೇಪನದ ಒಡವೆ ಅಡವಿಟ್ಟು ಸಾಲ ಪಡೆಯಲು ಬಂದಾಗ ಸಿಬ್ಬಂದಿ ಆತ ತಂದಿದ್ದ ಒಡವೆಯ ಮೊದಲ ಪದರವನ್ನು ಪರೀಕ್ಷಿಸಿದಾಗ ಅಸಲಿ ಎಂದು ತಿಳಿದು ಬಂದಿದ್ದರಿಂದ ಸಾಲ ಕೊಟ್ಟಿದ್ದಾರೆ.
ವಂಚಕ 39.59 ಲಕ್ಷ ರೂ. ಸಾಲ ಪಡೆದು ಎರಡು ತಿಂಗಳಾದರೂ ಬ್ಯಾಂಕ್ ಕಡೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಆತ ಅಡವಿಟ್ಟಿದ್ದ ಚಿನ್ನವನ್ನು ಮತ್ತೆ ಸಂಪೂರ್ಣವಾಗಿ ಪರೀಕ್ಷಿಸಿದಾಗ ಆತ ಅಡವಿಟ್ಟಿರುವುದು ನಕಲಿ ಚಿನ್ನ ಎಂಬುವುದು ಗೊತ್ತಾಗಿದೆ.
ಬಿಜೆಪಿ ಪೋಸ್ಟರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ತಕ್ಷಣ ಬ್ಯಾಂಕ್ ಮ್ಯಾನೇಜರ್ ಲಕ್ಷೇಶ್ ರಾಲಪಲ್ಲಿ ಎಂಬುವರು ಅಶೋಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.