Sunday, May 5, 2024
Homeರಾಜ್ಯಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳ ಸೆರೆ

ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳ ಸೆರೆ

ಬೆಂಗಳೂರು, ಅ.7- ವಯಸ್ಸಾದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಅವರೊಂದಿಗೆ ವಿಶ್ವಾಸದಿಂದ ಮಾತನಾಡಿ ಟೀ ಕೊಡಿಸುವ ನೆಪದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ, ಪ್ರಜ್ಞೆ ತಪ್ಪಿಸಿ ಅವರ ಮೈಮೇಲಿರುವ ಚಿನ್ನದ ಓಡವೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತಿದ್ದ ಆರೋಪಿಯನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ 6.5ಲಕ್ಷ ರೂ.ಬೆಲೆ ಬಾಳುವ 115 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ ನಿವಾಸಿ ಕಾರ್ತಿಕ್ (39) ಹಾಗೂ ಈತನ ಸ್ನೇಹಿತನನ್ನು ಪೊಲೀಸರು ಬಂಧಿಸಿ 3 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಹಳ್ಳಿಮನೆ ಹೋಟೆಲ್ ಹತ್ತಿರದಲ್ಲಿ ಜಗನ್ನಾಥ್ ಗುಪ್ತ ಎಂಬುವವರು ಕಾಂಡಿಮೆಂಟ್ಸ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಗನ್ನಾಥ ಅವರಿಗೆ ಆರೋಪಿ ಕಾರ್ತಿಕ್ ಪರಿಚಯವಾಗಿ ಅವರ ವಿಶ್ವಾಸ ಗಳಿಸಿದ್ದಾನೆ.

ಬಿಜೆಪಿ ಪೋಸ್ಟರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸೆ.22ರಂದು ಮಧ್ಯಾಹ್ನ 12ರಿಂದ 12.30ರ ಸಮಯದಲ್ಲಿ ಆರೋಪಿ ಟೀ ಕುಡಿಯುವ ಸಲುವಾಗಿ ಜಗನ್ನಾಥ್ ಗುಪ್ತ ಅವರನ್ನು ಕರೆದುಕೊಂಡು ಅಂಗಡಿಯ ಮುಂಭಾಗದಲ್ಲಿರುವ ಟೀ ಅಂಗಡಿಯ ಪಕ್ಕದ ಕಲ್ಲಿನ ಮೇಲೆ ಕೂರಿಸಿದ್ದಾನೆ. ಆರೋಪಿ ಕಾರ್ತಿಕ್ ಅಂಗಡಿಯಿಂದ ಟೀ ತೆಗೆದುಕೊಂಡು, ಅವರಿಗೆ ಗೊತ್ತಾಗದ ಹಾಗೆ ಒಂದರಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ ಇಬ್ಬರು ಟೀ ಕುಡಿದಿರುತ್ತಾರೆ. ನಂತರ ಸ್ವಲ್ಪ ಸಮಯದಲ್ಲಿ ಜಗನ್ನಾಥ್ ಗುಪ್ತ ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.

ಆ ಸಮಯದಲ್ಲಿ ಜಗನ್ನಾಥ ಅವರ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಡಾಲರ್ ಸಮೇತ ಇರುವ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿನ ಹಲವಾರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ಆರೋಪಿ ಬಗ್ಗೆ ಉಪಯುಕ್ತ ಮಾಹಿತಿ ಸಂಗ್ರಹಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈತನ ಕೃತ್ಯ ಬೆಳಕಿಗೆ ಬಂದಿದ್ದು, ಕಳ್ಳತನ ಮಾಡಿದ ಚಿನ್ನದ ಒಡವೆಗಳನ್ನು ಮತ್ತೊಬ್ಬ ಆರೋಪಿಯ ಮೂಲಕ ಮಾರಾಟ ಮಾಡಿಸುತ್ತಿದ್ದುದು ತಿಳಿದು ಬಂದಿದೆ.

ಐಷಾರಾಮಿ ಪಲ್ಲಕ್ಕಿ ಸಾರಿಗೆ ಸೇವೆ ಆರಂಭ

ಈತನ ಮಾಹಿತಿ ಮೇರೆಗೆ ಮತ್ತೊಬ್ಬನನ್ನು ಬಂಧಿಸಿ ಸುಮಾರು 6.5 ಲಕ್ಷ ರೂ ಮೌಲ್ಯದ 115 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಕಾರ್ತಿಕ್ ಈ ಹಿಂದೆ ಕಾಡುಗೋಡಿ ಪೊಲೀಸ್ ಠಾಣೆಯ ಕೊಲೆ ಪ್ರಕರಣ ಹಾಗೂ ವಿಜಯನಗರ ಪೊಲೀಸ್ ಠಾಣೆಯ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ, ಜಾಮೀನು ಪಡೆದು ಹೊರಬಂದ ನಂತರ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಯಸ್ಸಾದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಚಿನ್ನಾಭರಣ ಎಗರಿಸುತ್ತಿರುವುದು ಗೊತ್ತಾಗಿದೆ.

ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಕೃಷ್ಣಮೂರ್ತಿ, ಇನ್ಸ್‍ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

RELATED ARTICLES

Latest News