Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಭತ್ತದ ಗದ್ದೆಯ ಕೆಸರಿನಲ್ಲಿ ಸಿಲುಕಿ ಅನ್ನದಾತ ಸಾವು

ಭತ್ತದ ಗದ್ದೆಯ ಕೆಸರಿನಲ್ಲಿ ಸಿಲುಕಿ ಅನ್ನದಾತ ಸಾವು

Farmer dies after getting stuck in Paddy Field mud

ಬಾಗೇಪಲ್ಲಿ,ಆ. 27– ಕೆಸರಿನ ಗದ್ದೆಯಲ್ಲಿ ಟ್ರಾಕ್ಟರ್‌ ಕೆಳಗೆ ಸಿಕ್ಕಿಕೊಂಡು ರೈತ ಮತಪಟ್ಟಿರುವ ಘಟನೆ ಚೇಳೂರು ತಾಲ್ಲೂಕಿನ ಚಾಕವೇಲು ಸಮೀಪ ದಿಗವಪ್ಯಾಯಲಪಲ್ಲಿಯಲ್ಲಿ ನಡೆದಿದೆ.ಪ್ರಗತಿಪರ ರೈತ ಶಂಕರರೆಡ್ಡಿ (48) ಮೃತಪಟ್ಟ ರೈತ.

ಭತ್ತ ಬೆಳೆಯುವ ಸಲುವಾಗಿ ಜಮೀನು ಸಮತಟ್ಟು ಮಾಡಿ ನೀರು ಹಾಕಿ ಕೆಸರಿನ ಗದ್ದೆಯಲ್ಲಿ ಟ್ರಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದಾಗ ಕೆಸರಿನಲ್ಲಿ ಟ್ರಾಕ್ಟರ್‌ ಸಿಕ್ಕಿ ಹಾಕಿಕೊಂಡಿದೆ. ಇದನ್ನು ತೆಗೆಯಲು ಹರಸಾಹಸ ಮಾಡಿ ಹೊರ ತೆಗೆಯುವಾಗ ಟ್ರಾಕ್ಟರ್‌ ಮಗುಚಿ ರೈತನ ಮೇಲೆ ಬಿದ್ದ ಕಾರಣ ರೈತ ಕೆಸರಿನಲ್ಲೇ ಹೂತು ಹೋಗಿದ್ದಾರೆ.

ಇದನ್ನು ನೋಡಿದ ಮಕ್ಕಳು ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಓಡಿಬಂದು ಹೊರ ತೆಗೆಯಲುಆಗದೇ ಜೆ.ಸಿ.ಬಿ.ಯಂತ್ರ ಕರೆಯಿಸಿ ಹೊರೆ ತೆಗೆದರಾದರೂ ಅಷ್ಟೊತ್ತಿಗಾಗಲೇ ರೈತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ವಿಷಯ ತಿಳಿದ ಚೇಳೂರು ತಾಲ್ಲೂಕು ತಹಸೀಲ್ದಾರ್‌ ಎ.ವಿ.ಶ್ರೀನಿವಾಸುಲುನಾಯುಡು ಪ್ರಭಾರಿ ಉಪ-ತಹಸೀಲ್ದಾರ್‌ ಎಂ.ಎನ್‌.ಈಶ್ವರ್‌ ಭೇಟಿ ನೀಡಿ ಪರೀಶೀಲನೇ ನಡೆಸಿದ್ದಾರೆ. ಚೇಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪರಿಹಾರ ನೀಡಲು ಒತ್ತಾಯ:
ಭತ್ತದ ಬೆಳೆ ಬೆಳೆಯಲು ಜಮೀನು ಹದ ಮಾಡಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ ರೈತ ಅಕಾಲಿಕ ದುರ್ಮರಣವಾಗಿದ್ದು ಆ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕೆಂದು ಚೇಳೂರು ತಾಲ್ಲುಕು ಪ್ರಗತಿಪರ ರೈತ ಮುಖಂಡರಾದ ಸೀತಿರೆಡ್ಡಿಪಲ್ಲಿ ಎಸ್‌‍.ವೈ. ವೆಂಕಟರವಣಾರೆಡ್ಡಿ ಚಾಕವೇಲು ಪಿ.ಎಸ್‌‍.ವೆಂಕಟರೆಡ್ಡಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

Latest News