Sunday, April 14, 2024
Homeಜಿಲ್ಲಾ ಸುದ್ದಿಗಳುಕಾರಿನ ಟಯರ್ ಬದಲಿಸುವಾಗ ಲಾರಿಯಿಂದ ಹಿಟ್ ಅಂಡ್ ರನ್ : ಮಾವ-ಅಳಿಯ ಬಲಿ

ಕಾರಿನ ಟಯರ್ ಬದಲಿಸುವಾಗ ಲಾರಿಯಿಂದ ಹಿಟ್ ಅಂಡ್ ರನ್ : ಮಾವ-ಅಳಿಯ ಬಲಿ

ಹಾಸನ, ಮಾ.30- ಪಂಕ್ಚರ್ ಆದ ಕಾರಿನ ಟಯರ್ ಬದಲಿಸುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಾವ-ಅಳಿಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೈಪಾಸ್ನಲ್ಲಿ ನಡೆದಿದೆ.ಅರಸೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿ ಮಧು (35) ಹಾಗೂ ಬೇಲೂರು ತಾಲೂಕಿನ ದೇವಿಹಳ್ಳಿಯ ಜವರಯ್ಯ( 65) ಮೃತಪಟ್ಟ ಮಾವ-ಅಳಿಯ.

ಬೆಂಗಳೂರಿನಿಂದ ಮಧು ಅವರು ಮಾವ ಹಾಗೂ ಪತ್ನಿ ಜತೆ ಕಾರಿನಲ್ಲಿ ಬರುತ್ತಿದ್ದಾಗ ಶೆಟ್ಟಿಹಳ್ಳಿ ಬೈಪಾಸ್ ಬಳಿ ಕಾರಿನ ಟಯರ್ ಪಂಕ್ಚರ್ ಆಗಿದೆ.ತಕ್ಷಣ ಮಧು ಅವರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಟಯರ್ ಬದಲಿಸುವಾಗ ವೇಗವಾಗಿ ಬಂದ ಲಾರಿ ಅಳಿಯ-ಮಾವನಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮಧು ಸ್ಥಳದಲ್ಲೆ ಸಾವನ್ನಪ್ಪಿದರೆ, ಮಾವ ಜವರಯ್ಯ ಅವರನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವ ಮಾಗ ಮಧ್ಯೆ ಮೃತಪಟ್ಟಿದ್ದಾರೆ.

ಇನ್ನು ಮಧು ಅವರ ಪತ್ನಿ ಗೀತಾಗೆ ಗಂಭೀರ ಗಾಯಗಳಾಗಿದ್ದು , ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಚನ್ನರಾಯಪಟ್ಟಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News