Friday, November 22, 2024
Homeಬೆಂಗಳೂರುಬೆಂಗಳೂರಿಗರೇ.., ಕುಡಿಯುವ ನೀರನ್ನು ಅನ್ಯ ಕಾರಣಗಳಿಗೆ ಬಳಸಿದರೆ ದಂಡ ಗ್ಯಾರಂಟಿ

ಬೆಂಗಳೂರಿಗರೇ.., ಕುಡಿಯುವ ನೀರನ್ನು ಅನ್ಯ ಕಾರಣಗಳಿಗೆ ಬಳಸಿದರೆ ದಂಡ ಗ್ಯಾರಂಟಿ

ಬೆಂಗಳೂರು,ಏ.11- ಜನರಿಗೆ ಕುಡಿಯೋಕೇ ನೀರು ಸಿಗುತ್ತಿಲ್ಲ, ಕುಡಿಯುವ ನೀರು ದುರ್ಬಳಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರೂ ಕ್ಯಾರೆ ಅನ್ನದ ಮೊಂಡು ಜನರ ಮೇಲೆ ಜಲ ಮಂಡಳಿ ದಂಡಾಸ್ತ್ರ ಬಳಸಿದೆ. ಕುಡಿಯುವ ನೀರು ವ್ಯರ್ಥ ಮಾಡಿ ಮೊಂಡಾಟವಾಡಿರುವ ಹಲವಾರು ಮಂದಿಯಿಂದ ಬರೊಬ್ಬರಿ 20 ಲಕ್ಷ ರೂ.ಗಳ ದಂಡ ಸಂಗ್ರಹಿಸಲಾಗಿದೆ.

ನಗರದ ಎಂಟು ವಲಯಗಳಲ್ಲಿ ಕುಡಿಯುವ ನೀರನ್ನು ವಾಹನ ತೊಳೆಯಲು, ಕಟ್ಟಡ ಕಟ್ಟಲು ಬಳಸಿದವರಿಂದ 20.25 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ. ನಗರದಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಜಲ ಮಂಡಳಿ ಅಧಿಕಾರಿಗಳು ಅನ್ಯ ಕಾರಣಗಳಿಗೆ ಕುಡಿಯುವ ನೀರು ಬಳಕೆ ಮಾಡಿದರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದರೂ ಆದರೂ ಕೆಲವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದೆ ನೀರು ಪೋಲು ಮಾಡಿರುವುದನ್ನುಗಂಭೀರವಾಗಿ ಪರಿಗಣಿಸಿ ಈ ದಂಡ ವಿಧಿಸಲಾಗಿದೆ.

ನೀರು ಪೋಲು ಮಾಡಿದವರಿಂದ ಐದು ಸಾವಿರ ರೂ.ಗಳಂತೆ ಬರೊಬ್ಬರಿ 20 ಲಕ್ಷದ 25 ಸಾವಿರ ರೂ.ಗಳ ದಂಡದ ಹಣ ಸಂಗ್ರಹಿಸಲಾಗಿದೆ.

ಯಾವ್ಯಾವ ವಲಯದಲ್ಲಿ ಎಷ್ಟು ದಂಡ ವಸೂಲಿ?
ಬೆಂಗಳೂರು ಕೇಂದ್ರ ವಲಯದಲ್ಲಿ 11 ಪ್ರಕರಣಗಳಿಂದ 55 ಸಾವಿರ ರೂ, ಪೂರ್ವ ವಲಯ ಒಂದರ 22 ಪ್ರಕರಣಗಳಿಂದ 1 ಲಕ್ಷ 10 ಸಾವಿರ ರೂ, ಪೂರ್ವ 2ನೇ ವಲಯದ 19 ಪ್ರಕರಣಗಳಿಂದ 95 ಸಾವಿರ ರೂ, ಉತ್ತರ-1ರ 17 ಪ್ರಕರಣ- 85 ಸಾವಿರ ರೂ, ಉತ್ತರ 2ರ 20 ಪ್ರಕರಣಗಳಿಂದ 1 ಲಕ್ಷ ರೂ. ಈಶಾನ್ಯ ವಿಭಾಗದಲ್ಲೆ ಅತಿಹೆಚ್ಚು ಎಂದರೆ ಬರೋಬ್ಬರಿ 1. 85 ಲಕ್ಷ ರೂ.ಗಳ ದಂಡ ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

RELATED ARTICLES

Latest News