Saturday, April 20, 2024
Homeಬೆಂಗಳೂರುಜಿ.ಆರ್.ಟೆಕ್‍ಪಾರ್ಕ್, ಸಲಾರ್‌ಪುರಿಯಾ ಸಂಸ್ಥೆ ವಿರುದ್ಧ ಎಫ್‍ಐಆರ್

ಜಿ.ಆರ್.ಟೆಕ್‍ಪಾರ್ಕ್, ಸಲಾರ್‌ಪುರಿಯಾ ಸಂಸ್ಥೆ ವಿರುದ್ಧ ಎಫ್‍ಐಆರ್

ಬೆಂಗಳೂರು,ಮಾ.1- ಕಂಪೌಂಡ್ ನಿರ್ಮಾಣ ಮಾಡಲು ಅನಧಿಕೃತವಾಗಿ ಮರಗಳನ್ನು ತೆರವು ಮಾಡಿದ್ದ ಜಿ.ಆರ್ ಟೆಕ್ ಪಾರ್ಕ್ ಮತ್ತು ಸಲಾರ್‍ಪುರಿಯಾ ಪ್ರೈವೈಟ್ ಲಿಮಿಟೆಡ್ ಸಂಸ್ಥೆಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮಹದೇವಪುರದಲ್ಲಿ ಇರುವ ಜೆ.ಆರ್ ಟೆಕ್ ಪಾರ್ಕ್ ಮತ್ತು ಸಲಾರ್ಪುರಿಯಾ ಲಿಮಿಟೆಡ್ ಕಂಪನಿಗಳು ಕಾಂಪೌಂಡ್ ನಿರ್ಮಾಣ ಮಾಡಲು ಅನಧಿಕೃತವಾಗಿ ಮರಗಳ ತೆರವು ಮಾಡಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿದ್ದಾರೆ.

ಪಾದಾಚಾರಿ ಮಾರ್ಗದಲ್ಲಿ ಇದ್ದ 25 ಮರಗಳನ್ನು ತೆರವು ಮಾಡಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಕೊಟ್ಟ ದೂರಿನ ಆಧಾರದ ಮೇಲೆ ಬಿಬಿಎಂಪಿಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ಇದ್ದ 25 ಮರಗಳನ್ನು ತೆರವು ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜಿ.ಆರ್.ಟೆಕ್ ಪಾರ್ಕ್ ಮತ್ತು ಸಲಾರ್‍ಪುರಿಯಾ ಸಂಸ್ಥೆಗಳ ವಿರುದ್ಧ ವೈಟ್ ಫೀಲ್ಡ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

RELATED ARTICLES

Latest News