ಥಾಣೆ, ಜು.3 – ಸಾಲ ಏಜೆನ್ಸಿ ಮತ್ತು ಖಾಸಗಿ ವಲಯದ ಪ್ರಮುಖ ಬ್ಯಾಂಕ್ಗೆ 3.26 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಸಾಗರ್ ಸುರೇಶ ಸೋನಾವನೆ ಮತ್ತು ರಾಜೇಶ್ ಶೆಟ್ಟೆ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ 2021 ಮತ್ತು ಡಿಸೆಂಬರ್ 2023 ರ ನಡುವೆ, ಸಾಲ ಒದಗಿಸುವ ಏಜೆನ್ಸಿಯ ಉದ್ಯೋಗಿಯಾಗಿದ್ದ ಆರೋಪಿ ಸೋನವಾನೆ ಮತ್ತು ರಾಜೇಶ್ ಶೆಟ್ಟೆ ಮತ್ತು ಅವರ ಸಹಚರ ಸಾಲ ಪಡೆಯಲು ಬ್ಯಾಂಕ್ಗೆ ಅರ್ಜಿ ಸಲ್ಲಿಸುವಾಗ ಸುಳ್ಳು ಮಾಹಿತಿಯನ್ನು ಸಲ್ಲಿಸಿದ್ದಾರೆ.
ಬ್ಯಾಂಕ್ಗೂ ಯಾಮಾರಿಸಿ ಹಣವನ್ನು ಪಡೆದ ನಂತರ, ಅವರು ಸಾಲವನ್ನು ಮರುಪಾವತಿ ಮಾಡದೆ ಸತಾಯಿಸಿದ ಕಾರಣ ದೂರು ನೀಡಲಾಗಿತ್ತು.ಇದರಿಂದ ಸಾಲದ ಏಜೆನ್ಸಿ ಮತ್ತು ಬ್ಯಾಂಕ್ಗೆ 3.26 ಕೋಟಿ ರೂಪಾಯಿ ನಷ್ಟವಾಗಿದೆ ಆರೋಪಿಸಲಾಗಿದೆ.
ಎಲ್ಲಾ ಆರೋಪಿಗಳನ್ನು ಬಂಧಿಸಲು ಮತ್ತು ದುರುಪಯೋಗಪಡಿಸಿಕೊಂಡ ಹಣವನ್ನು ಜಪ್ತಿಮಾಡಲು ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.ನೌಪಾದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಅವರ ವಿರುದ್ಧ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ, ಫೋರ್ಜರಿ ಮತ್ತು ಇತರ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.