ಧರ್ಮಸ್ಥಳ, ಫೆ.4- ಅಕ್ರಮವಾಗಿ ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಗ್ಯಾಂಗನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮೂಲದ ರಮೀಝ್(20), ಅಕ್ಬರ್ ಅಲಿ(24), ಮೊಹಮ್ಮದ್ ಮುಸ್ತಫಾ(22), ಮೊಹಮ್ಮದ್ ಸಾಕ್(27) ಹಾಗೂ ಮತ್ತೊಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ.
ಆರೋಪಿಯಲ್ಲಿ ಒಬ್ಬನಾದ ಅಕ್ಬರ್ ಅಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಹಲವರ ಹೆಸರುಗಳಲ್ಲಿ ನಕಲಿ ದಾಖಲೆಗಳನ್ನು ಕೊಟ್ಟು ಸಿಮ್ ಕಾರ್ಡ್ ಪಡೆದಿದ್ದ. ಇದಕ್ಕೆ ಇತರ ಆರೋಪಿಗಳು ಸಹಕರಿಸಿದ್ದರು ಎಂದು ತಿಳಿದು ಬಂದಿದೆ. ಎರಡು ವರ್ಷ ದುಬೈನಲ್ಲಿದ್ದು, ಕಳೆದ ನಾಲ್ಕು ತಿಂಗಳ ಅಷ್ಟೇ ಆತ ತನ್ನೂರಿಗೆ ಬಂದಿದ್ದ ಪ್ರಾಥಮಿಕ ಮಾಹಿತಿಯ ಪ್ರಕಾರ ಅಕ್ಬರ್ ಅಲಿ ವಿದೇಶದಲ್ಲಿದ್ದುಕೊಂಡೆ ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾವನಿಂದ ಪಡೆದುಕೊಂಡಿದ್ದ.
ಆರೋಪಿ ರಮೀಝ್ ಮತ್ತು ಮೊಹಮ್ಮದ್ ಸಾಕ್ ಈ ಸಿಮ್ ಕಾರ್ಡ್‍ಗಳನ್ನು ನಕಲಿ ದಾಖಲೆಗಳನ್ನು ನೀಡಿ ಪಡೆಯಲು ಕಮಿಷನ್ ಕೂಡ ನೀಡುತ್ತಿದ್ದರು. ನಂತರ ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್‍ಗಳನ್ನು ಬೆಂಗಳೂರಿನ ವ್ಯಕ್ತಿಗಳಿಗೆ ಖಾಸಗಿ ಬಸ್‍ಗಳ ಮೂಲಕ ಕಳಿಸಿಕೊಡುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಗೆ ಸಂಕಟವಾಗಿವೆ : ಡಿಸಿಎಂ ಡಿಕೆಶಿ
ಪ್ರಸ್ತುತ ಈ ಸಿಮ್ ಕಾರ್ಡ್‍ಗಳನ್ನು ಯಾವ ಉದ್ದೇಶಕ್ಕೆ ಪಡೆಯಲಾಗುತ್ತಿತ್ತು ಮತ್ತು ಯಾರ ಕೈಗೆ ನೀಡಲಾಗುತ್ತಿತ್ತು ಎಂಬುದು ಬಾರಿ ಕುತೂಹಲ ಕೆರಳಿಸಿದೆ. ಬಂತ ಆರೋಪಿಗಳಿಂದ 42 ಅಕ್ರಮ ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ಮೂಲಗಳು ತಿಳಿಸಿವೆ. ಈ ಸಿಮ್ ಕಾರ್ಡ್‍ಗಳನ್ನು ಬಳಸಿಕೊಂಡು ದೇಶ-ದ್ರೋಹ ಕೃತಿಗಳನ್ನು ನಡೆಸಿ ಅದು ಪತ್ತೆಯಾಗದಂತೆ ಮಾಡುವುದು ಇದರ ಉದ್ದೇಶ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಮಂಗಳೂರಿನಲ್ಲಿ ಇಂತಹ ಜಾಲವಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ಅ¯ರ್ಟ್ ಆಗಿದ್ದಾರೆ.
ಮೊಬೈಲ್ ಮಳಿಗೆಗಳು ಹಾಗೂ ದೂರಸಂಪರ್ಕ ಕಂಪೆನಿಗಳಿಗೆ ಸರಿಯಾದ ದಾಖಲೆಗಳನ್ನು ಪರಿಶೀಲಿಸದೇ ಸಿಮ್ ಕಾರ್ಡ್‍ಗಳನ್ನು ನೀಡದಿರುವಂತೆ ಎಚ್ಚರಿಕೆ ನೀಡಲಾಗಿದೆ. ಬಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಅಕ್ರಮ ಸಿಮ್ ಕಾರ್ಡ್‍ನ ಹಿಂದಿನ ರಹಸ್ಯ ಸದ್ಯದಲ್ಲಿಯೇ ಬಹಿರಂಗಗೊಳ್ಳಬೇಕಿದೆ.