Monday, October 14, 2024
Homeಇದೀಗ ಬಂದ ಸುದ್ದಿ'ಅಶ್ವಮೇಧ' ಬಸ್‍ಗಳಿಗೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ

‘ಅಶ್ವಮೇಧ’ ಬಸ್‍ಗಳಿಗೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು,ಫೆ.4- ರಾಜ್ಯ ರಸ್ತೆ ಸಾರಿಗೆ ನಿಗಮದ ಅಶ್ವಮೇಧ ಕ್ಲಾಸಿಕ್ ಹೊಸ ವಿನ್ಯಾಸದ ಬಸ್‍ಗಳಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕೆಎಸ್‍ಆರ್‍ಟಿಸಿಯು ಅಶ್ವಮೇಧ ಹೊಸ ವಿನ್ಯಾಸದ 800 ಬಸ್‍ಗಳನ್ನು ಮೇ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಒದಗಿಸಲು ಉದ್ದೇಶಿಸಿದೆ.

ಮೊದಲ ಹಂತದಲ್ಲಿ ನಾಳೆ ನೂರು ಬಸ್‍ಗಳಿಗೆ ವಿಧಾನಸೌಧ ಮುಂಭಾಗ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಎಸ್‍ಆರ್‍ಟಿಸಿಯ ಹಿರಿಯ ಅಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News