Tuesday, February 27, 2024
Homeರಾಷ್ಟ್ರೀಯಪ್ರತಿನಿತ್ಯ ಸ್ನಾನ ಮಾಡದ ಪತಿಯಿಂದ ವಿಚ್ಛೇದನಕ್ಕೆ ಮೊರೆ ಹೋದ ಪತ್ನಿ

ಪ್ರತಿನಿತ್ಯ ಸ್ನಾನ ಮಾಡದ ಪತಿಯಿಂದ ವಿಚ್ಛೇದನಕ್ಕೆ ಮೊರೆ ಹೋದ ಪತ್ನಿ

ಟರ್ಕಿ,ಫೆ.4- ತನ್ನ ಗಂಡ ನಿತ್ಯ ಸ್ನಾನ ಮಾಡುವುದಿಲ್ಲ ಎಂದು ಸಿಟ್ಟುಗೊಂಡು, ಆತನಿಂದ ನನಗೆ ವಿಚ್ಛೇದನ ಕೊಡಿಸಿ ಎಂದು ಪತ್ನಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ತನ್ನ ಪತಿ ಎಂದಿಗೂ ಸ್ನಾನ ಮಾಡುವುದಿಲ್ಲ. ಐದು ದಿನಗಳವರೆಗೆ ಒಂದೇ ಬಟ್ಟೆಗಳನ್ನು ಧರಿಸುತ್ತಾರೆ. ಮೂರ್ನಾಲ್ಕು ದಿನ ಬ್ರಷ್ ಮಾಡುವುದಿಲ್ಲ. ಇದರಿಂದಾಗಿ ಆತನ ದೇಹದಿಂದ ಅಸಹನೀಯ ದುರ್ವಾಸನೆ ಬರುತ್ತದೆ. ಆತನೊಂದಿಗೆ ಬದುಕುವುದು ಕಷ್ಟಕರವಾಗುತ್ತಿದೆ ಎಂದು ಆರೋಪಿಸಿದ್ದಾಳೆ.

ಪತಿಯ ಜೊತೆ ಕೆಲಸ ಮಾಡುವವರೂ ಕೂಡ ಆತನಿಂದ ದೂರ ನಿಲ್ಲುತ್ತಾರೆ. ಬೆವರಿನ ವಾಸನೆಯಿಂದ ಆತನ ಜೊತೆ ಕೆಲಸ ಮಾಡುವುದು ತುಂಬಾ ಕಷ್ಟಗುತ್ತಿದೆ ಎಂದಿದ್ದಾರೆಂದು ದೂರಿದ್ದಾಳೆ. ಮಹಿಳೆಯ ದೂರನ್ನು ಪರಿಗಣಿಸಿದ ಟರ್ಕಿಯ ಅಂಕಾರಾದ ಕೌಟುಂಬಿಕ ನ್ಯಾಯಾಲಯ ಸಾಕ್ಷಿಗಳನ್ನು ಕೇಳಿದ್ದು, ಮಹಿಳೆಯು ತನ್ನ ಪತಿ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ಹಾಜರುಪಡಿಸಿದ್ದಾಳೆ.

ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಹೇಳಿ : ಪ್ರಿಯಾಂಕ್ ಖರ್ಗೆ

ಸ್ಥಳೀಯರು ಮತ್ತು ಆತನೊಂದಿಗೆ ಕೆಲಸ ಮಾಡುವ ಜನರನ್ನು ಸಹ ನ್ಯಾಯಾಲಯಕ್ಕೆ ಕರೆಸಲಾಗಿದೆ. ಈ ವೇಳೆ ಮಹಿಳೆಯ ಪತಿ ನಿಜವಾಗಿಯೂ ತುಂಬಾ ಕೊಳಕು ರೀತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಈ ಸಾಕ್ಷಿದಾರರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಕೊನೆಗೆ ಈ ಪ್ರಕರಣದ ವಿಚಾರಣೆ ನಡೆಸಿ ಇಬ್ಬರ ವಾದವನ್ನು ಆಲಿಸಿದ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ನೀಡಲು ಒಪ್ಪಿಗೆ ನೀಡಿದೆ. ಅಲ್ಲದೇ ಅಶುದ್ಧವಾಗಿ ಬದುಕುತ್ತಿರುವ ಪತಿಗೆ ಛೀಮಾರಿ ಹಾಕಿದೆ. ಅಷ್ಟೇ ಅಲ್ಲದೇ, ಸುಮಾರು 500,000 ಟರ್ಕಿಶ್ ಲಿರಾ ಅಂದರೆ ಸರಿಸುಮಾರು 13.69 ಲಕ್ಷ ರೂ.ಗಳನ್ನು ಮಹಿಳೆಗೆ ಪರಿಹಾರವಾಗಿ ನೀಡುವಂತೆ ಪತಿಗೆ ನ್ಯಾಯಾಲಯ ಆದೇಶಿಸಿದೆ.

RELATED ARTICLES

Latest News