Friday, December 13, 2024
Homeರಾಜ್ಯಮಹಿಳಾ ನ್ಯಾಯಾಧೀಶೆ ಅನುಮಾನಸ್ಪದವಾಗಿ ಸಾವು

ಮಹಿಳಾ ನ್ಯಾಯಾಧೀಶೆ ಅನುಮಾನಸ್ಪದವಾಗಿ ಸಾವು

ಲಕ್ನೋ, ಫೆ.4- ಬದೌನ್ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ನ್ಯಾಯಾಧೀಶೆ ಅನುಮಾನಸ್ಪದವಾಗಿ ಅವರ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಅವರ ನಿವಾಸಕ್ಕೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ದಾವಿಸಿದ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಕೊಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನ್ಯಾಯಾಧೀಶೆ ಜ್ಯೋತ್ಸನಾ(27) ಅವರ ಶವ ಪತ್ತೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯರಲ್ಲಿ ಇದು ಆತಂಕ ಮೂಡಿಸಿದೆ.

ಬಿಗಿ ಭದ್ರತೆಯ ನ್ಯಾಯಾಂಗ ಸಮುಚ್ಛಯದಲ್ಲಿ ಇವರು ವಾಸಿಸುತ್ತಿದ್ದರು. ಆದರೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಇದರ ಹಿಂದೆ ಏನಾದರೂ ದುಷ್ಕøತ್ಯ ಅಡಗಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ. ಮೂಲತಃ ಮೌ ಜಿಲ್ಲೆಯವರಾದ ಜ್ಯೋತ್ಸನಾ ರಾಯ್ ಅವರು ಅವಿವಾಹಿತರಾಗಿದ್ದು, ಏಕಾಂಗಿಯಾಗಿ ಇಲ್ಲಿ ವಾಸಿಸುತ್ತಿದ್ದರು.

ವೈಫಲ್ಯಗಳನ್ನು ಮರೆಮಾಚಲು ಕೇಂದ್ರ ರುದ್ಧ ಗೂಬೆ ಕೂರಿಸುವ ಪ್ರಯತ್ನ : ಬಿಜೆಪಿ ವಾಗ್ದಾಳಿ

ಸುದ್ದಿ ಹರಡುತ್ತಿದ್ದಂತೆಯೇ ವಕೀಲರು ಹಾಗೂ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸಂತಾಪ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದರು. ವಿವಿಜ್ಞಾನ ಪರೀಕ್ಷ ತಂಡ ಹಾಗೂ ಸ್ಥಳೀಯ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಸ್ಥಳದಲ್ಲಿದ್ದ ಮೊಬೈಲ್ ಫೋನ್‍ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಶವವನ್ನು ಬದೌನ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

RELATED ARTICLES

Latest News