Wednesday, May 1, 2024
Homeರಾಜ್ಯಕಿಯೋನಿಕ್ಸ್ ನಲ್ಲಿ 430 ಕೋಟಿ ರೂ ಅವ್ಯವಹಾರ : ಪ್ರಿಯಾಂಕ ಖರ್ಗೆ

ಕಿಯೋನಿಕ್ಸ್ ನಲ್ಲಿ 430 ಕೋಟಿ ರೂ ಅವ್ಯವಹಾರ : ಪ್ರಿಯಾಂಕ ಖರ್ಗೆ

ಬೆಂಗಳೂರು,ಫೆ.4- ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಕಿಯೋನಿಕ್ಸ್ ಮೂಲಕ ನಡೆದಿರುವ ಖರೀದಿಯಲ್ಲಿ 430 ಕೋಟಿ ರೂ.ಗಳಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ. ಇದನ್ನು ಹೆಚ್ಚಿನ ತನಿಖೆಗೊಳಪಡಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡುಮೂರು ತಿಂಗಳ ಹಿಂದೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ ಎಂದು ಕೆಲವು ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದರು. ಆಗ ಬಿಜೆಪಿಯ ಸಿ.ಎನ್.ಅಶ್ವಥ್ ನಾರಾಯಣ, ಆರ್.ಅಶೋಕ್ ಮತ್ತಿತರರು ನನ್ನ ರಾಜೀನಾಮೆ ಕೇಳಿದ್ದರು. ನಾನು ದಾಖಲೆಗಳ ಸಹಿತ ವಿಷಯ ಜನರ ಮುಂದಿಟ್ಟ ನಂತರ ಅವರ ಬಾಯಿ ಬಂದ್ ಆಗಿದೆ ಎಂದರು.

ಇದು ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗಲೇ ನಡೆದ ಆಡಿಟ್ ವರದಿ. ಇದನ್ನು ಅಶ್ವಥ್ ನಾರಾಯಣ ಅವರೇ ಓದಿಲ್ಲ. ಬಾಯಿಗೆ ಬಂದಂತೆ ಆರೋಪ ಮಾಡಿದರು. ನಮ್ಮ ಸರ್ಕಾರ ಬಂದು 6 ತಿಂಗಳು ಕಳೆದಿರಲಿಲ್ಲ. ಯಾವುದೇ ಖರೀದಿಯೂ ಆಗಿರಲಿಲ್ಲ. ಆದರೂ ನಮ್ಮ ರಾಜೀನಾಮೆ ಕೇಳಿದ್ದರು. ಅವರು ಮಾಡಿದ ತಪ್ಪಿಗೆ ನಾನು ರಾಜೀನಾಮೆ ನೀಡಬೇಕು ಎಂಬುದು ಬಿಜೆಪಿಯವರ ವಾದವಾಗಿತ್ತು ಎಂದು ಹೇಳಿದರು.

ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಗೆ ಸಂಕಟವಾಗಿವೆ : ಡಿಸಿಎಂ ಡಿಕೆಶಿ

ಲೆಕ್ಕ ಪರಿಶೋಧಕರು 2018ರಿಂದ 2022ರ ಅವವರೆಗಿನ ಖರೀದಿ ವಹಿವಾಟುಗಳಲ್ಲಿನ ಲೋಪದೋಷಗಳ ಬಗ್ಗೆ 45 ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಅದನ್ನು ಆಧರಿಸಿ ನಾವು ಆಂತರಿಕ ಲೆಕ್ಕಪರಿಶೋಧನೆ ನಡೆಸಿದ್ದೇವೆ. ಶೇ.3ರಷ್ಟು ಮಾತ್ರ ಪರಿಶೀಲನೆಯಾಗಿದೆ. ಅದರಲ್ಲೇ 430 ಕೋಟಿ ರೂ.ಗೂ ಹೆಚ್ಚಿನ ಅವ್ಯವಹಾರ ಕಂಡುಬಂದಿದೆ. ಉಳಿದ ಶೇ.97ರಷ್ಟು ಪರಿಶೀಲನೆಯಾಗಬೇಕಿದೆ. ಅದಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿಯವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸರ್ಕಾರ ರಚಿಸಿದೆ ಎಂದು ಹೇಳಿದರು.

ಕಿಯೋನಿಕ್ಸ್‍ನ ಅವ್ಯವಹಾರದಲ್ಲಿ ಫಲಾನುಭವಿಗಳ್ಯಾರು? ರಾಜಕಾರಣಿಗಳ ಮತ್ತು ಅಧಿಕಾರಿಗಳ ಪಾತ್ರವೆಷ್ಟು ಎಂಬುದನ್ನು ಪರಿಶೀಲಿಸಲಾಗುತ್ತದೆ. ಗುತ್ತಿಗೆದಾರರ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರು ಈಗ ಉಸಿರೇ ಬಿಡುತ್ತಿಲ್ಲ. 430 ಕೋಟಿ ಯಾರ ಮನೆಯ ದುಡ್ಡು ಬಿಜೆಪಿಯವರು ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆಯಲ್ಲ ಬಿಜೆಪಿ ಜಾತ್ರೆ ಮಾಡಿಕೊಂಡಿದ್ದಾರೆ. ಈ ಹಣದಲ್ಲಿಯೇ ಅವರು ಶಾಸಕರ ಖರೀದಿಯ ಆಪರೇಷನ್ ಕಮಲ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು

ಕೆಲವರು ಮಾಧ್ಯಮದವರ ಹೆಸರಿನಲ್ಲಿಯೂ ಕಿಯೋನಿಕ್ಸ್‍ನಲ್ಲಿ ಹಣ ಲೂಟಿ ಹೊಡೆದಿದ್ದಾರೆ. ಎಲ್ಲವೂ ಪರಿಶೀಲನೆ ನಡೆಯುತ್ತಿದೆ ಎಂದರು.

RELATED ARTICLES

Latest News