Sunday, July 21, 2024
Homeರಾಜ್ಯಸಾಲುಸಾಲು ರಜೆ, ಪ್ರವಾಸಿ ತಾಣಗಳತ್ತ ಜನಸಾಗರ

ಸಾಲುಸಾಲು ರಜೆ, ಪ್ರವಾಸಿ ತಾಣಗಳತ್ತ ಜನಸಾಗರ

ಬೆಂಗಳೂರು,ಸೆ.28- ಇಂದು ಈದ್ ಮಿಲಾದ್, ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದು ನಗರ ನಿವಾಸಿಗಳು ಊರುಗಳತ್ತ ತೆರಳುತ್ತಿದ್ದು ರಾತ್ರಿಯಂದಲೇ ಸಾರಿಗೆ ಹಾಗೂ ಖಾಸಗಿ ಬಸ್‍ಗಳಲ್ಲಿ ಜನ ಪ್ರಯಾಣಿಸಿದ್ದು ಸಂಚಾರ ದಟ್ಟಣೆ ಉಂಟಾಗಿತ್ತು. ನಾಳಿನ ಕರ್ನಾಟಕ ಬಂದ್‍ಗೆ ಸರ್ಕಾರಿ ರಜೆ ಇಲ್ಲದಿದ್ದರೂ ಖಾಸಗಿ ಕಂಪನಿ, ಕೈಗಾರಿಕೆಗಳಿಗೆ ರಜೆ ಇರಲಿದೆ. ಶನಿವಾರ ಕೆಲವರಿಗೆ ರಜೆ, ಭಾನುವಾರ ವಾರದ ರಜೆ ಹಾಗೂ ಸೋಮವಾರ ಗಾಂಧಿ ಜಯಂತಿ ಹಿನ್ನಲೆಯಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ನಗರ ನಿವಾಸಿಗಳು ಪುಲ್ ಖುಷಿಯಾಗಿದ್ದು, ಊರುಗಳತ್ತ ತೆರಳುತ್ತಿದ್ದಾರೆ.

ರಾತ್ರಿಯಿಂದಲೇ ಪ್ರಯಾಣ ಆರಂಭಿಸಿದ್ದು ನಗರದ ಕೆಂಪೇಗೌಡ ಬಸ್ ನಿಲ್ದಾಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಇನ್ನೂ ಕೆಲವರು ಖಾಸಗಿ ಟ್ರಾವಲ್ಸ್‍ಗಳಲ್ಲಿ ಬುಕ್ಕಿಂಗ್ ಮಾಡಿದ್ದು ಆನಂದ್ ರಾವ್ ವೃತ್ತ, ಕೆಆರ್ ಮಾರುಕಟ್ಟೆ, ಗೋರಗುಂಟೆಪಾಳ್ಯ, ನವರಂಗ್ ಬಳಿ ಇರುವ ಖಾಸಗಿ ಬಸ್‍ಗಳ ಬುಕ್ಕಿಂಗ್ ಸೆಂಟರ್ ಗಳ ಮುಂದೆ ಪ್ರಯಾಣಿಕರು ಹೆಚ್ಚಾಗಿದ್ದ ದೃಶ್ಯಗಳು ಕಂಡು ಬಂದವು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಕಳೆದ ವಾರವಷ್ಟೆ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗಿ ಬಂದಿದ್ದೆವೆ ಎಂದು ಕೆಲವರು ಊರುಗಳಿಗೆ ತೆರಳದ ಕೆಲವರು ಟ್ರಿಪ್ ಪ್ಲಾನ್ ಮಾಡಿಕೊಂಡು ಪ್ರವಾಸಿ ತಾಣ, ಪುಣ್ಯ ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಇಂದು ಈದ್‍ಮಿಲಾದ್ ಹಿನ್ನಲೆಯಲ್ಲಿ ರಜೆ ಇದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ, ಇಶಾಫೌಂಡೇಷನ್, ಶಿವಗಂಗೆ, ರಾಮನಗರದ ರಾಮದೇವರ ಬೆಟ್ಟ, ತುಮಕೂರು ಜಿಲ್ಲೆಯ ದೇವರಾಯನ ದುರ್ಗ, ಗೋರವನಹಳ್ಳಿ, ಮಾದೇಶ್ವರ ಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ಸೇರಿದಂತೆ ಮತ್ತಿತರ ಕಡೆ ಇಂದು ಮುಂಜಾನೆ ಯಿಂದಲೆ ಸ್ವಂತ ವಾಹನ ಹಾಗೂ ಸಾರಿಗೆ ಬಸ್ ಗಳಲ್ಲಿ ಜನರು ತೆರಳಿದ್ದು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಗೋರಗುಂಟೆಪಾಳ್ಯ, ನೆಲಮಂಗಲ ಟೋಲ್, ನೈಸ್ ಟೋಲ್, ಅತ್ತಿಬೆಲೆ, ಆನೆಕಲ್, ಮೈಸೂರು ರಸ್ತೆ, ದೇವನಹಳ್ಳಿ ರಸ್ತೆಯಲ್ಲಿ ರಾತ್ರಿಯಿಂದಲೆ ವಾಹನ ಸಂಚಾರ ಹೆಚ್ಚಾಗಿದ್ದು ಇಂದು ಬೆಳಗ್ಗೆ ಟ್ರಾಫಿಕ್ ಸಮಸ್ಥೆ ಉಂಟಾಗಿತ್ತು. ಇನ್ನೂ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೆ ಹರಿದು ಬಂದಿದ್ದರಿಂದ ಬೆಟ್ಟದ ನಂದಿ ಗಿರಿ ದಾಮ ಸುತ್ತಮುತ್ತ ಸಂಚಾರ ದಟ್ಟಣೆ ಕಂಡುಬಂತು.

ಛತ್ತೀಸ್‍ಗಢದಲ್ಲಿ ಸಿಡಿಲಿಗೆ ಮೂವರು ಮಹಿಳೆಯರ ಬಲಿ

ಒಟ್ಟಿನಲ್ಲಿ ಸಾಲು ಸಾಲು ರಜೆ ಬಂದರೆ ಸಾಕು ನಗರ ನಿವಾಸಿಗಳು ದಿನಿತ್ಯದ ಟ್ರಾಫಿಕ್ ಕಿರಿಕಿರಿ ಕೆಲಸದ ಒತ್ತಡ ದಿಂದ ಮುಕ್ತಿ ಪಡೆದು ಮನ ಥಣಿಸಿಕೊಂಡು ರಿಲ್ಯಾಕ್ಸ್‍ಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದ್ದು ರಜೆ ಸಿಕ್ಕರೆ ಸಾಕು ಪ್ರಕೃತಿ ಮಡಿಲಿಗೆ ಲಗ್ಗೆ ಇಡುತ್ತಿದ್ದಾರೆ.

RELATED ARTICLES

Latest News