Thursday, December 5, 2024
Homeಬೆಂಗಳೂರುಐವರು ದರೋಡೆಕೋರರ ಬಂಧನ : 11 ಲಕ್ಷ ಹಣ, ಮೊಬೈಲ್‌ಗಳ ಜಪ್ತಿ

ಐವರು ದರೋಡೆಕೋರರ ಬಂಧನ : 11 ಲಕ್ಷ ಹಣ, ಮೊಬೈಲ್‌ಗಳ ಜಪ್ತಿ

Five robbers arrested; Rs 11 lakh cash, mobile phones seized

ಬೆಂಗಳೂರು,ನ.28– ರೂಮ್ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ-ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ ಐದು ಮಂದಿ ದರೋಡೆಕೋರರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 11.30 ಲಕ್ಷ ನಗದು ಹಾಗೂ 6 ಲಕ್ಷ ಬೆಲೆಯ 7 ಮೊಬೈಲ್ಗಳು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಉಮರ್ ಅಹಮದ್(25), ಶಾಸಜದ್ ಪಾಷ(23), ಮಹಮದ್ ಮೊಯೀಜ್(25), ಯಾಸೀನ್ ಅಹಮದ್ ಷರೀಫ್(19), ಶೋಯೆಬ್ ಪಾಷ(20) ಬಂಧಿತ ದರೋಡೆಕೋರರು. ಸಿದಯ್ಯ ರಸ್ತೆಯಲ್ಲಿನ ಸಿಟಿ ಯೂನಿಯನ್ ಬ್ಯಾಂಕ್ ಕಟ್ಟಡದ 4ನೇ ಮಹಡಿಯಲ್ಲಿ ರಾಮ್ ಪ್ರಸಾದ್ ಪಂಡಿತ್ ಎಂಬುವರು ರೂಮ್ ಮಾಡಿಕೊಂಡು ವಾಸವಿದ್ದಾರೆ. ಇವರು ವಾಹನ ಬಿಡಿ ಭಾಗಗಳ ಅಂಗಡಿಯೊಂದರ ನೌಕರರಾಗಿದ್ದು ಮಾಲೀಕರು 15 ಲಕ್ಷ ಹಣವನ್ನು ಬ್ಯಾಂಕ್ಗೆ ಕಟ್ಟಲು ಇವರಿಗೆ ನೀಡಿದ್ದರಿಂದ ಹಣವನ್ನು ತಂದು ಮನೆಯಲ್ಲಿಟ್ಟಿದ್ದರು.

ನ.19ರಂದು ಬೆಳಗಿನಜಾವ 4 ಗಂಟೆ ಸಮಯದಲ್ಲಿ ದರೋಡೆಕೋರರು ಇವರ ರೂಮ್ಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ 15 ಲಕ್ಷ ನಗದು ಹಾಗೂ 2 ಮೊಬೈಲ್ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ರಾಮ್ಪ್ರಸಾದ್ ಪಂಡಿತ್ ಅವರು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ದರೋಡೆಕೋರರ ಬಗ್ಗೆ ಹಲವು ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಐದು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಇನ್ಸ್ಪೆಕ್ಟರ್ ಕಿರಣ್ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

RELATED ARTICLES

Latest News