Thursday, December 12, 2024
Homeರಾಜ್ಯನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

Follower attempts suicide after Nikhil Kumaraswamy defeat

ಬೆಂಗಳೂರು,ನ.24- ನಿಖಿಲ್‌ ಕುಮಾರಸ್ವಾಮಿಯವರ ಅಭಿಮಾನಿಯೊಬ್ಬ ವಿಷ ಸೇವಿಸಿ ಆತಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಸಂಜೆ 6.30ರ ಸಮಯದಲ್ಲಿ ಚನ್ನಪಟ್ಟಣ ತಾಲೂಕಿನ ಕುಡ್ಲೂರು ಸಮೀಪದ ಶ್ರೀರಾಂಪುರದಲ್ಲಿ ನಡೆದಿದೆ.

ಅಭಿ ಅಲಿಯಾಸ್‌‍ ಮಂಜು ಅವರು ನಿಖಿಲ್‌ ಕುಮಾರಸ್ವಾಮಿಯವರು ಸೋತ ಹಿನ್ನಲೆಯಲ್ಲಿ ಆಘಾತಗೊಂಡು ಪತ್ರ ಬರೆದಿಟ್ಟು ಮನೆಯಲ್ಲಿ ವಿಷ ಸೇವಿಸಿದ್ದಾರೆ.ತಕ್ಷಣ ಕುಟುಂಬದವರು ಇದನ್ನು ನೋಡಿ ಮಂಡ್ಯದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಂದು ಸಂಜೆ ಡಿಸ್ಚಾರ್ಜ್‌ ಆಗಲಿದ್ದಾರೆ.

ಮಂಜು ಜೆಡಿಎಸ್‌‍ ಕಾರ್ಯಕರ್ತರಾಗಿದ್ದು, ನಿಖಿಲ್‌ ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನಿಖಿಲ್‌ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಸೋತಿರುವುದು ನನಗೆ ನಿರಾಸೆಯಾಗಿದೆ ಎಂದು ಪತ್ರ ಬರೆದಿಟ್ಟು ಆತಹತ್ಯೆಗೆ ಯತ್ನಿಸಿದ್ದರು.

RELATED ARTICLES

Latest News