Monday, December 2, 2024
Homeರಾಜ್ಯದೆಹಲಿಯಿಂದ ವಾಪಸ್‌‍ ಬಂದು ಉಪಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಯಿಸುತ್ತೇನೆ : ದೇವೇಗೌಡರು

ದೆಹಲಿಯಿಂದ ವಾಪಸ್‌‍ ಬಂದು ಉಪಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಯಿಸುತ್ತೇನೆ : ದೇವೇಗೌಡರು

Will respond to by-election results after returning from Delhi: Deve Gowda

ಬೆಂಗಳೂರು,ನ.24– ದೆಹಲಿಯಿಂದ ವಾಪಸ್‌‍ ಬಂದ ಬಳಿಕ ಚನ್ನಪಟ್ಟಣ ವಿಧಾನಸಭಾ ಉಪಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಾವು ಮಹಾನ್‌ ಆಧ್ಯಾತಿಕ ಗುರು ರಾಮಾನುಜಾಚಾರ್ಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಪವಿತ್ರ ಕಾರ್ಯಕ್ರಮದಲ್ಲಿ ರಾಜಕೀಯದ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ತಾವು ದೆಹಲಿಗೆ ಭೇಟಿ ನೀಡುತ್ತಿದ್ದು, ಅಲ್ಲಿಂದ ಬಂದ ಬಳಿಕ ಜೆಡಿಎಸ್‌‍ ಪಕ್ಷದ ಕಚೇರಿಯಲ್ಲಿ ಮುಖಂಡರ ಜೊತೆ ಸಭೆ ಮಾಡುತ್ತೇನೆ. ಆಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅತ್ಯಂತ ಶ್ರೇಷ್ಠ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ ಎಂದರು.

ರಾಮಾನುಜಾಚಾರ್ಯರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ನಮ ಪುಣ್ಯ. ಇದಕ್ಕೆ ಅವಕಾಶ ಮಾಡಿಕೊಟ್ಟವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು.
ರಾಮಾನುಜಾಚಾರ್ಯರು ತಳಮಟ್ಟದಲ್ಲಿದ್ದವರನ್ನು ಮೇಲಕ್ಕೆ ತರಿಸುವ ಸದ್ಗುಣ ಹೊಂದಿದ್ದರು. ರಾಮಾನುಜಾಚಾರ್ಯರ ತತ್ವಾದರ್ಶಗಳು ಅತ್ಯಂತ ಉನ್ನತವಾದವು ಎಂದು ಹೇಳಿದರು.

RELATED ARTICLES

Latest News