Thursday, May 23, 2024
Homeರಾಜ್ಯನಾಗರಹೊಳೆಯಲ್ಲಿ ಅರಣ್ಯ ಸಚಿವ ಖಂಡ್ರೆ ಸಫಾರಿ

ನಾಗರಹೊಳೆಯಲ್ಲಿ ಅರಣ್ಯ ಸಚಿವ ಖಂಡ್ರೆ ಸಫಾರಿ

ಮೈಸೂರು, ಮೇ 13- ಅರಣ್ಯ ಸಚಿವ ಈಶ್ವರ್‌ಖಂಡ್ರೆ ನಾಗರಹೊಳೆ ಪ್ರದೇಶದಲ್ಲಿ ಸಫಾರಿ ನಡೆಸುತ್ತಿದ್ದಾಗ ಹುಲಿಯ ದರ್ಶನವಾಗಿದೆ.ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವರು ಕರ್ತವ್ಯಕ್ಕೆ ಮರಳಿದ್ದು, ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಮೇವು ಮತ್ತು ನೀರಿನ ಲಭ್ಯತೆಯನ್ನು ಪರಿಶೀಲಿಸಲು ಖುದ್ದು ಸಫಾರಿ ನಡೆಸಿದರು.

ಹಾದಿ ಮಧ್ಯೆ ಸಚಿವರಿಗೆ ಹುಲಿಯ ದರ್ಶನವಾಗಿದೆ. ಹುಲಿ ದಾರಿಯಲ್ಲಿ ಮಲಗಿದ್ದು, ಸಚಿವರ ವಾಹನವನ್ನು ಕಂಡು ಎದ್ದು ಜೀಪಿನತ್ತ ಬರಲಾರಂಭಿಸಿದೆ. ಅನಂತರ ಇದ್ದಕ್ಕಿದ್ದಂತೆ ಹಾದಿ ಬದಲಿಸಿ ಅರಣ್ಯದತ್ತ ತೆರಳಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

RELATED ARTICLES

Latest News