ಮುಂಬೈ,ಡಿ.26- ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿದ್ದಾರೆ ಎನ್ನಲಾಗಿದ್ದ ವಿಮಾನದಲ್ಲಿದ್ದ 276 ಜನರು ಭಾರತಕ್ಕೆ ಮರಳಿದ್ದಾರೆ. ಇನ್ನೂ 23 ಮಂದಿ ಫ್ರಾನ್ಸ್‍ಗೆ ತೆರಳಲು ನಿರ್ಧರಿಸಿದ್ದಾರೆ. 303 ಭಾರತೀಯ ಪ್ರಯಾಣಿಕರಿದ್ದ ಲೆಜೆಂಡ್ ಏರ್‍ಲೈನ್ಸ್‍ಗೆ ಸೇರಿದ ವಿಮಾನ ತೆರಳಿದ ಬಳಿಕ ಫುಜಿರಾದಲ್ಲಿ ಅಲ್ಪಾವಧಿಯ ನಿಲುಗಡೆಯೊಂದಿಗೆ ಮುಂಬೈಗೆ ಆಗಮಿಸಿತು.
ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಜನರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿತ್ತು. ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರನ್ನು ನೇಮಿಸಲಾಗಿತ್ತು. ವಿಮಾನವನ್ನು ನಿರ್ವಹಿಸುವ ಖಾಸಗಿ ಜೆಟ್ ಸಿಬ್ಬಂದಿ ಸದಸ್ಯರನ್ನು ಫ್ರಾನ್ಸ್ ಕೂಡ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ವಿಮಾನದಲ್ಲಿದ್ದ 276 ಪ್ರಯಾಣಿಕರು ಹಿಂತಿರುಗಿದ್ದಾರೆ. ಇದರಲ್ಲಿ 23 ಜನರು ಫ್ರಾನ್ಸ್‍ಗೆ ಮರಳಿದ್ದಾರೆ. ಇತರ ಪ್ರಯಾಣಿಕರು ಸ್ವಯಂಪ್ರೇರಣೆಯಿಂದ ಭಾರತಕ್ಕೆ ಮರಳಿದ್ದಾರೆ. ಒಟ್ಟು 303 ಪ್ರಯಾಣಿಕರ ಪೈಕಿ ನಾಲ್ವರು ನೇಪಾಳದವರು. ಇಬ್ಬರು ಪ್ರಯಾಣಿಕರನ್ನು ಫ್ರೆಂಚ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ಬಿಎಸ್‍ವೈ
11 ಮಂದಿ ಅಪ್ರಾಪ್ತ ವಯಸ್ಕರು ಇದ್ದರು. ಬಂಧಿತ ಇಬ್ಬರು ಪ್ರಯಾಣಿಕರನ್ನು ಮಾನವ ಕಳ್ಳಸಾಗಣೆಯಲ್ಲಿ ಅವರ ಪಾತ್ರ ಏನೆಂಬುದನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಮೊದಲು ಈ ವಿಮಾನವು ಸೋಮವಾರ ಮಧ್ಯಾಹ್ನ 2:20 ಕ್ಕೆ ಮುಂಬೈ ತಲುಪಬೇಕಾಗಿತ್ತು, ಆದರೆ ಅದು ತಡವಾಯಿತು. ವಿಮಾನದಲ್ಲಿದ್ದ 50 ಪ್ರಯಾಣಿಕರು ಫ್ರಾನ್ಸ್ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಕಾರಣ ಹಿಂತಿರುಗಲು ಬಯಸುವುದಿಲ್ಲ ಎಂದು ಹೇಳಲಾಗಿದೆ. ನಂತರ ಕೆಲವು ಪ್ರಯಾಣಿಕರನ್ನು ಬಿಟ್ಟು ವಿಮಾನ ಮುಂಬೈಗೆ ಹೊರಟಿತು. ಆದರೆ, ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರೊಮೇನಿಯಾದ ಲೆಜೆಂಡ್ ಏರ್ಲೈನ್ಸ್ನ ಈ ವಿಮಾನವು 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು, ಅವರಲ್ಲಿ ಹೆಚ್ಚಿನವರು ಭಾರತೀಯರು. ವಿಮಾನವು ದುಬೈನಿಂದ ನಿಕರಾಗುವಾಗೆ ಹೊರಟು ತೈಲ ತುಂಬಲು ಫ್ರಾನ್ಸ್ ವತ್ರಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದಿತ್ತು. ಈ ಸಮಯದಲ್ಲಿ, ಮಾನವ ಕಳ್ಳಸಾಗಣೆಯ ಬಲಿಪಶುಗಳನ್ನು ಅದರಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಫ್ರೆಂಚ್ ಅಧಿಕಾರಿಗಳಿಗೆ ತಿಳಿದು ಬಂದಿತ್ತು.
8 ವರ್ಷಗಳಿಂದ ಕೋಮಾದಲ್ಲಿದ್ದ ಯೋಧ ಹುತಾತ್ಮ
ಮಾನವ ಕಳ್ಳಸಾಗಣೆಯ ಶಂಕೆ ಹಿನ್ನಲೆಯಲ್ಲಿ 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್‍ನಲ್ಲಿ ತಡೆದು ನಿಲ್ಲಿಸಲಾಗಿತ್ತು. ಈ ವಿಮಾನ ಯುಎಇಯಿಂದ ನಿಕರಾಗುವಾಗೆ ಹೋಗುತ್ತಿತ್ತು. ಮಾಹಿತಿಯ ಪ್ರಕಾರ, ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಈ ವಿಮಾನವನ್ನು ಫ್ರಾನ್ಸ್‍ನಲ್ಲಿ ನಿಲ್ಲಿಸಲಾಗಿದೆ. ವಿಮಾನವನ್ನು ಫ್ರಾನ್ಸ್ ಅಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ