Homeರಾಜ್ಯರಂಗೇರಿರುವ ಅಪೆಕ್ಸ್ ಬ್ಯಾಂಕ್‌ ಅಖಾಡ

ರಂಗೇರಿರುವ ಅಪೆಕ್ಸ್ ಬ್ಯಾಂಕ್‌ ಅಖಾಡ

ಬೆಂಗಳೂರು, ಸೆ.3- ಕಳೆದ ಬಾರಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಪೆಕ್ಸ್ ಬ್ಯಾಂಕ್‌ ಚುನಾವಣೆ ಇದೀಗ ಮತ್ತೆ ಕುತೂಹಲ ಕೆರಳಿಸಿದೆ. ಅಪೆಕ್ಸ್ ಬ್ಯಾಂಕ್‌ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ್ದಾರೆ. ಕಳೆದ ಬಾರಿ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ಕೊಡಿಸಲು ಆಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದರು.

ಈ ವಿಚಾರವಾಗಿ ಮಾಜಿ ಸಚಿವ ಕೆ.ಎನ್‌. ರಾಜಣ್ಣ ನಡುವೆ ಜಿದ್ದಾಜಿದ್ದಿ ನಡೆದಿತ್ತು. ರಾಜಣ್ಣ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಚುನಾವಣೆಯೇ ರಾಜಕೀಯವಾಗಿ ಮಹತ್ವ ಪಡೆದುಕೊಂಡಿತ್ತು.
ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ವರಿಷ್ಠರ ಮೂಲಕ ಚುನಾವಣೆಯನ್ನು ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿತ್ತು. ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯ ವಿಚಾರವಾಗಿ ಕಾಂಗ್ರೆಸ್‌‍ನಲ್ಲಿ ಆಂತರಿಕ ಜಟಾಪಟಿ ಕೂಡ ಜೋರಾಗಿತ್ತು. ಹೀಗಾಗಿ ಅಪೆಕ್‌್ಸ ಬ್ಯಾಂಕ್‌ ಚುನಾವಣೆ ಮತ್ತಷ್ಟು ರಾಜಕೀಯ ಮಹತ್ವ ಪಡೆದು ಕೊಂಡಿತ್ತು.

ಆದರೆ ಇದೀಗ ಪಕ್ಷದೊಳಗಿನ ಹಲವು ಪ್ರಮುಖ ವಿಚಾರಗಳು ಶಮನಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಈ ಬಾರಿ ಚುನಾವಣೆ ನಡೆಯುವುದರಿಂದ ಮತ್ತೆ ಡಿ.ಕೆ. ಶಿವಕುಮಾರ್‌ ಬಣ ಹಾಗೂ ಕೆ.ಎನ್‌. ರಾಜಣ್ಣ ನಡುವೆ ರಾಜಕೀಯ ಪೈಪೋಟಿ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ.

ಸುಮಾರು 11 ನಿರ್ದೇಶಕರ ಬೆಂಬಲ ಹೊಂದಿದ್ದಾರೆ ಎನ್ನಲಾಗಿರುವ ಕೆ.ಎನ್‌. ರಾಜಣ್ಣ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ಬಿಜೆಪಿ ಹಾಗೂ ಜೆಡಿಎಸ್‌‍ ಬೆಂಬಲಿತ ನಿರ್ದೇಶಕರು ರಾಜಣ್ಣ ಅವರನ್ನು ಬೆಂಬಲಿಸಬಹುದು ಎಂದು ಹೇಳಲಾಗುತ್ತಿದೆ. ಇದೇ ತಿಂಗಳು 10ರಂದು ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುತ್ತಾರೋ ಆಥವಾ ತಮ ಬೆಂಬಲಿಗರನ್ನು ಕಣಕ್ಕಿಳಿಸುತ್ತಾರೋ ಎಂಬ ಚರ್ಚೆಗಳಿವೆ. ಮತ್ತೊಂದೆಡೆ, ಕಾಂಗ್ರೆಸ್‌‍ ಪಕ್ಷದೊಳಗಿನ ಸಮೀಕರಣಗಳು ಈ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದೂ ಗಮನಾರ್ಹವಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಹಿಂದೆ ತಮ ಆಪ್ತರಾದ ಎಸ್‌‍ ರವಿ ಅವರನ್ನು ಅಪೆಕ್‌್ಸ ಬ್ಯಾಂಕ್‌ ಅಧ್ಯಕ್ಷರನ್ನಾಗಿ ಮಾಡಲು ಆಸಕ್ತಿ ತೋರಿಸಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಾದ ಸಹಕಾರ ಒಕ್ಕೂಟ ಮಹಾಮಂಡಲ ಕೆಎಂಎಫ್‌ ಮತ್ತು ಅಪೆಕ್‌್ಸ ಬ್ಯಾಂಕ್‌ ಅಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌‍ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಗಳಾಗಿವೆ. ಬಿಜೆಪಿ-ಜೆಡಿಎಸ್‌‍ನ ಪೈಪೋಟಿ ನಡುವೆ, ಕಾಂಗ್ರೆಸ್‌‍ನಲ್ಲೂ ಆಂತರಿಕವಾಗಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ರಾಜಣ್ಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡು ರಾಜಕೀಯವಾಗಿ ಸವಾಲಿನ ಸನ್ನಿವೇಶ ಸೃಷ್ಟಿಸಿದ್ದರು. ಸಚಿವರಾಗಿದ್ದ ಅವರು ರಾಜಕೀಯ ಬೆಳವಣಿಗೆಗಳಲ್ಲಿ ಅವಧಿಗೂ ಮುನ್ನವೇ ಮಾಜಿಯಾದರು. ಈಗ ಅಪೆಕ್‌್ಸ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಸುಲಭಕ್ಕೆ ರಾಜಣ್ಣ ಅವರಿಗೆ ಅವಕಾಶ ಮಾಡಿಕೊಡುತ್ತಾರೋ? ಅಥವಾ ತಮ ಬೆಂಬಲಿಗರನ್ನು ಅಖಾಡಕ್ಕಿಳಿಸುತ್ತಾರೋ ಎಂಬುದು ಕಾದು ನೋಡಬೇಕಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಅಪೆಕ್‌್ಸ ಬ್ಯಾಂಕ್‌ ಚುನಾವಣೆ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗುತ್ತಾ ಅಥವಾ ಒಮತದ ಮೂಲಕ ಅಧ್ಯಕ್ಷರ ಆಯ್ಕೆ ನಡೆಯುತ್ತಾ ಎಂಬುದು ಸದ್ಯದ ಕುತೂಹಲ.

RELATED ARTICLES
spot_img

Latest News