Homeರಾಜ್ಯಡಿಸಿಎಂ ಪರಮೇಶ್ವರ್‌ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ

ಡಿಸಿಎಂ ಪರಮೇಶ್ವರ್‌ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ

ಬೆಂಗಳೂರು, ಜೂ. 18- ಅನಾರೋಗ್ಯಕ್ಕೊಳಗಾಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಮನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸೋಂಕು ಜ್ವರ ಪೀಡಿತರಾಗಿರುವ ಪರಮೇಶ್ವರ್‌, ಕಳೆದ ಒಂದು ವಾರದಿಂದಲೂ ಮನೆಯಲ್ಲೇ ಉಳಿದು ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದ ನಡುವೆಯೂ ಪರಮೇಶ್ವರ್‌ ಸ್ವ ಕ್ಷೇತ್ರ ಕೊರಟಗೆರೆಗೆ ಭೇಟಿ ನೀಡಿ ಮತದಾರರ ಜೊತೆ ಚರ್ಚೆ ನಡೆಸಿದ್ದರು. ಅಲ್ಲಿಂದ ಬಂದ ಬಳಿಕ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.

ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ವಿಶ್ರಾಂತಿ ಪಡೆದಿದ್ದ ಉಪ ಮುಖ್ಯಮಂತ್ರಿಯವರನ್ನು, ಮುಖ್ಯಮಂತ್ರಿಯವರು, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪರಮೇಶ್ವರ್‌ ಅರೋಗ್ಯದಿಂದ ಇದ್ದಾರೆ. ಮಧ್ಯಾಹ್ನ ವಿಧಾನಸೌಧಕ್ಕೆ ಬಂದು ಮತದಾನ ಚಲಾಯಿಸುತ್ತಾರೆ. ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.

RELATED ARTICLES

Latest News