Homeಇದೀಗ ಬಂದ ಸುದ್ದಿಬಿಜೆಪಿ, ಜೆಡಿಎಸ್‌‍ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕ ಶಿವರಾಮ್‌ ಹೆಬ್ಬಾರ್‌

ಬಿಜೆಪಿ, ಜೆಡಿಎಸ್‌‍ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕ ಶಿವರಾಮ್‌ ಹೆಬ್ಬಾರ್‌

ಬೆಂಗಳೂರು, ಜೂ. 18- ಬಿಜೆಪಿ ಅಥವಾ ಜೆಡಿಎಸ್‌‍ನ ಯಾವ ನಾಯಕರೂ ತಮ್ಮನ್ನು ಸಂಪರ್ಕಿಸಿ ಮತ ಕೇಳಲಿಲ್ಲ. ಹೀಗಾಗಿ ವಿಧಾನಪರಿಷತ್‌ ಚುನಾವಣೆಯಲ್ಲಿ ಆತಸಾಕ್ಷಿಯ ಮತ ಚಲಾಯಿಸಿದ್ದೇವೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಅರೆಬೈಲು ಶಿವರಾಮ್‌ ಹೆಬ್ಬಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಥವಾ ಜೆಡಿಎಸ್‌‍ನ ನಾಯಕರು ಸೌಜನ್ಯಕ್ಕಾದರೂ ನಮ್ಮನ್ನು ಸಂಪರ್ಕಿಸಿ ಮತ ಕೇಳುತ್ತಾರೆ ಎಂದು ನಿನ್ನೆ ರಾತ್ರಿಯವರೆಗೂ ಕಾಯುತ್ತಿದ್ದೆವು. ಆದರೆ ಯಾರೂ ನಮನ್ನು ಸಂಪರ್ಕಿಸಿಲ್ಲ ಎಂದು ವಿಷಾದಿಸಿದರು.

ಕಾಂಗ್ರೆಸ್‌‍ನ ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಯವರು ತಮನ್ನು ಕರೆದು ಅಭಿವೃದ್ಧಿ ವಿಚಾರವಾಗಿ ನಿಮೊಂದಿಗಿರುವುದಾಗಿ ಭರವಸೆ ನೀಡಿದ್ದಾರೆ. ಇಂದು ಮತದಾನದ ಬಳಿಕ ಕೂಡ ನಾವು ಅವರನ್ನು ಭೇಟಿ ಮಾಡಿದ್ದೇವೆ. ಸೂಕ್ತ ಕಾಲದಲ್ಲಿ ನಿಮೊಂದಿಗಿರುವುದಾಗಿ ಹೇಳಿದ್ದಾರೆ ಎಂದರು. ಹಿಂದೆ ನಾವು ಬಿಜೆಪಿಗೆ ಬೆಂಬಲಿಸಿದ್ದರಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ನಾವು ಸಚಿವರಾಗಿದ್ದೆವು. ಯಾವುದೋ ಕಾರಣಕ್ಕೆ ನಮನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಕಷ್ಟಕಾಲದಲ್ಲಾದರೂ ನಮಿಂದ ಮತ ಕೇಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ನಮನ್ನು ಬಿಜೆಪಿ-ಜೆಡಿಎಸ್‌‍ನ ಯಾವ ನಾಯಕರೂ ಸಂಪರ್ಕಿಸಿಲ್ಲ ಎಂದು ಹೇಳಿದರು.

ಉಚ್ಛಾಟಿತ ಶಾಸಕರು ಎನ್‌ಡಿಎ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ಸ್ವಪ್ನದಲ್ಲಿ ಅವರು ಇದ್ದಂತಿದೆ. ನಾವು ಜೆಡಿಎಸ್‌‍ ಅಭ್ಯರ್ಥಿಗೆ ಮತ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News