ಮೆಕ್ಸಿಕೊ ಸಿಟಿ, ಜೂ.18: ಫುಟ್‌ಬಾಲ್ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ತಾರೆ ಆಟಗಾರ ಲೂಯಿಸ್ ಡಿಯಾಜ್ ಅದ್ಬುತ ಪ್ರದರ್ಶನಿಂದ ಕೊಲಂಬಿಯಾ ತಂಡವನ್ನು ಉಜ್ಬೇಕಿಸ್ತಾನ್ ವಿರುದ್ಧ 3-1 ಗೋಲುಗಳ ಜಯದತ್ತ ಮುನ್ನಡೆಸಿದರು. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ, ವಿಶ್ವಕಪ್‌ಗೆ ಮೊದಲ ಬಾರಿಗೆ ಕಾಲಿಟ್ಟ ಡೇನಿಯಲ್ ಮುನೋಸ್ 40ನೇ ನಿಮಿಷದಲ್ಲಿ ಲೂಯಿಸ್ ಡಿಯಾಜ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿ ಕೊಲಂಬಿಯಾಗೆ ಮುನ್ನಡೆ ತಂದರು.
60ನೇ ನಿಮಿಷದಲ್ಲಿ ಫೈಜುಲ್ಲಾಯೆವ್ ಅಬ್ಬೋಸ್ಬೆಕ್ ಗೋಲು ಗಳಿಸುವ ಮೂಲಕ ಉಜ್ಬೇಕಿಸ್ತಾನ್ ಪಂದ್ಯವನ್ನು 1-1ರಿಂದ ಸಮಬಲಗೊಳಿಸಿತು. ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡಿದ ಉಜ್ಬೇಕಿಸ್ತಾನ್ ತಂಡಕ್ಕೆ ಇದು ಐತಿಹಾಸಿಕ ಕ್ಷಣವಾಗಿತ್ತು. ಆದರೆ 65ನೇ ನಿಮಿಷದಲ್ಲಿ ಲೂಯಿಸ್ ಡಿಯಾಜ್ ನಿರ್ಣಾಯಕ ಗೋಲು ದಾಖಲಿಸಿದರು. ಸಮೀಪದಿಂದ ಹೊಡೆದ ಅವರ ಶಾಟ್ ಗೋಲ್‌ಕೀಪರ್ ಉತ್ಕಿರ್ ಯೂಸುಪೋವ್ ಅವರ ಕೈಗಳಿಗೆ ತಾಗಿ ನಿಧಾನವಾಗಿ ಗೋಲುರೇಖೆ ದಾಟಿತು.
ಪಂದ್ಯದ ಹೆಚ್ಚುವರಿ ಸಮಯದಲ್ಲಿ ಜಾಮಿಂಟನ್ ಕ್ಯಾಂಪಾಜ್ ಮತ್ತೊಂದು ಗೋಲು ಸೇರಿಸಿ ಕೊಲಂಬಿಯಾದ ಗೆಲುವನ್ನು ಖಚಿತಪಡಿಸಿದರು. ಮೆಕ್ಸಿಕೊ ನಗರದ ಪ್ರಸಿದ್ಧ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ 80,824 ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯ ನಡೆಯಿತು. ಹೆಚ್ಚಿನ ಸಂಖ್ಯೆಯ ಕೊಲಂಬಿಯಾ ಅಭಿಮಾನಿಗಳು ತಂಡಕ್ಕೆ ಭರ್ಜರಿ ಬೆಂಬಲ ನೀಡಿದರು. ವಿಶ್ವ ಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿರುವ ಕೊಲಂಬಿಯಾ, 50ನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನ್ ವಿರುದ್ಧ ಭಾರೀ ನೆಚ್ಚಿನ ತಂಡವಾಗಿತ್ತು. ಈ ಗೆಲುವಿನೊಂದಿಗೆ ಕೊಲಂಬಿಯಾ ಕೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಇದಕ್ಕೂ ಮುನ್ನ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮತ್ತು ತಂಡಗಳು ಅಚ್ಚರಿಯ 1-1 ಡ್ರಾಗೆ ತೃಪ್ತಿಪಟ್ಟಿದ್ದವು. ಮುಂದಿನ ಪಂದ್ಯದಲ್ಲಿ ಕೊಲಂಬಿಯಾ ತಂಡ ಕಾಂಗೊವನ್ನು ಎದುರಿಸಲಿದ್ದು, ಉಜ್ಬೇಕಿಸ್ತಾನ್ ತಂಡ ನಾಯಕತ್ವದ ಪೋರ್ಚುಗಲ್ ವಿರುದ್ಧ ಸೆಣಸಲಿದೆ. ಕರ್ತಾರ್‌ನಲ್ಲಿ ನಡೆದ 2022ರ ಫೀಪ ವಿಶ್ವಕಪ್‌ನ ಅರ್ಹತೆ ಪಡೆಯಲು ವಿಫಲವಾಗಿದ್ದ ಕೊಲಂಬಿಯಾ, ಈ ಬಾರಿ ವಿಶ್ವಕಪ್‌ಗೆ ಮರಳಿದೆ. ತಂಡದ ಅತ್ಯುತ್ತಮ ಸಾಧನೆ 2014ರ ಬ್ರೆಜಿಲ್ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶವಾಗಿತ್ತು.
ದಕ್ಷಿಣ ಅಮೆರಿಕದ ಅರ್ಹತಾ ಸುತ್ತಿನಲ್ಲಿ ಕೊಲಂಬಿಯಾ, ಅರ್ಜೆಂಟೀನಾ ಮತ್ತು ಈಕ್ವೆಡಾರ್ ಮೂರನೇ ಸ್ಥಾನ ಪಡೆದಿತ್ತು. ಉಜ್ಬೇಕಿಸ್ತಾನ್ ತನ್ನ ಏಷ್ಯನ್ ಅರ್ಹತಾ ಗುಂಪಿನಲ್ಲಿ ಗೆದ್ದು ವಿಶ್ವಕಪ್‌ಗೆ ಪ್ರವೇಶಿಸಿತ್ತು.
Colombia defeats Uzbekistan FIFA World Cup
