Thursday, April 16, 2026
Homeಅಂತಾರಾಷ್ಟ್ರೀಯ608 ದಿನ ಬಾಹ್ಯಾಕಾಶ ಕಳೆದು ದಾಖಲೆ ಮಾಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸೌ ನಿವೃತ್ತಿ

608 ದಿನ ಬಾಹ್ಯಾಕಾಶ ಕಳೆದು ದಾಖಲೆ ಮಾಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸೌ ನಿವೃತ್ತಿ

ಕೇಪ್‌ ಕೆನವೆರಲ್‌‍, ಜ.21- ನಾಸಾದ ಹಿರಿಯ ಗಗನಯಾತ್ರಿಸುನೀತಾ ವಿಲಿಯಮ್ಸೌ ನಿವೃತ್ತರಾಗಿದ್ದಾರೆ. ಬಾಹ್ಯಾಕಾಶ ಸಂಸ್ಥೆ ಈ ಬಗ್ಗೆ ಸುದ್ದಿ ಪ್ರಕಟಿಸಿದ್ದು, ಅವರ ನಿವೃತ್ತಿ ಡಿಸೆಂಬರ್‌ ಅಂತ್ಯದಲ್ಲಿ ಜಾರಿಗೆ ಬಂದಿದೆ ಎಂದು ಹೇಳಿದೆ. ಬೋಯಿಂಗ್‌ನ ದುರದೃಷ್ಟಕರ ಕ್ಯಾಪ್ಸುಲ್‌ ಪರೀಕ್ಷಾ ಹಾರಾಟದಲ್ಲಿ ವಿಲಿಯಮ್ಸೌ ಅವರ ಸಿಬ್ಬಂದಿ ಬುಚ್‌ ವಿಲೋರ್‌ ಈಗಾಗಲೆ ನಾಸಾವನ್ನು ತೊರೆದರು.

ಈ ಜೋಡಿ ಕಳೆದ 2024 ರಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್‌ ಸಿಬ್ಬಂದಿ ಕ್ಯಾಪ್ಸುಲ್‌ ಅನ್ನು ಹಾರಿಸಿದ ಮೊದಲಿಗರು ಅವರ ಮಿಷನ್‌ ಕೇವಲ ಒಂದು ವಾರ ಮಾತ್ರ ಇರಬೇಕಿತ್ತು, ಆದರೆ ಸ್ಟಾರ್‌ಲೈನರ್‌ ತೊಂದರೆಯಿಂದಾಗಿ ಒಂಬತ್ತು ತಿಂಗಳುಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆಯಬೇಕಾಯಿತು. ಕೊನೆಯಲ್ಲಿ, ಅವರು ಕಳೆದ 2025 ಮಾರ್ಚ್‌ನಲ್ಲಿ ಸ್ಪೇಸ್‌‍ಎಕ್‌್ಸನೊಂದಿಗೆ ಭೂಮಿಗೆ ಇಳಿದಿದ್ದಾರು.

ನೌಕಾಪಡೆಯ ಮಾಜಿ ಕ್ಯಾಪ್ಟನ್‌ ವಿಲಿಯಮ್ಸೌ ಅವರಿಗೆ ಈಗ 60 ವರ್ಷ, ನಾಸಾದಲ್ಲಿ 27 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕೀರ್ತ ಅವರದು. ಮೂರು ಭಾರಿ ಅಂತರಾಷ್ಟೀಯ ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಗಳಲ್ಲಿ 608 ದಿನಗಳನ್ನು ಕಳೆದಿದ್ದಾರೆ ಮಹಿಳೆಯೊಬ್ಬರು ಅತಿ ಹೆಚ್ಚು ಬಾಹ್ಯಾಕಾಶ ನಡಿಗೆಯ ಸಮಯಕ್ಕಾಗಿ ದಾಖಲೆಯನ್ನು ಸ್ಥಾಪಿಸಿದ್ದಾರೆ.ಇದಲ್ಲದೆ ಬಾಹ್ಯಾಕಾಶ ಯಾನದಲ್ಲೂ 62 ಗಂಟೆ ದಾಖಲೆ ಇದೆ.

ಸುನೀತಾ ವಿಲಿಯಮ್ಸೌ ಅವರನ್ನು ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಒಂದು ಹಾದಿಯನ್ನು ತೋರಿಸಿದ ಸಾಧಕಿ ಎಂದು ನಾಸಾದ ಹೊಸ ಆಡಳಿತಾಧಿಕಾರಿ ಜೇರೆಡ್‌ ಐಸಾಕ್‌ಮನ್‌‍ ಹೇಳಿದ್ದಾರೆ. ನಿವೃತ್ತಿಗೆ ಅಭಿನಂದನೆಗಳು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೋಯಿಂಗ್‌ನ ಮುಂದಿನ ಸ್ಟಾರ್‌ಲೈನರ್‌ ಕಾರ್ಯಾಚರಣೆಯು ಗಗನಯಾನಿ ಬದಲು ಸರಕುಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸುತ್ತದೆ.
ಯಾರನ್ನಾದರೂ ವಿಮಾನದಲ್ಲಿ ಸೇರಿಸುವ ಮೊದಲು ಕ್ಯಾಪ್ಸುಲ್‌ನ ಎಲ್ಲಾ ಥ್ರಸ್ಟರ್‌ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾಸಾ ಬಯಸುತ್ತದೆ. ಈ ವರ್ಷದ ಕೊನೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

RELATED ARTICLES

Latest News