Homeಇದೀಗ ಬಂದ ಸುದ್ದಿಬೆಳಗಾವಿಯಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 17 ಸಾವಿರ ಲೀಟರ್‌ ಡಿಸೇಲ್‌ ಜಪ್ತಿ

ಬೆಳಗಾವಿಯಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 17 ಸಾವಿರ ಲೀಟರ್‌ ಡಿಸೇಲ್‌ ಜಪ್ತಿ

ಬೆಳಗಾವಿ,ಜ.21-ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋಟಿ ಕೋಟಿ ತೆರಿಗೆ ವಂಚಿಸಿ ಗಲ್‌್ಫ ರಾಷ್ಟ್ರಗಳಿಂದ ರಾಜ್ಯಕ್ಕೆ ಡೀಸೆಲ್‌ ತರಿಸಿಕೊಂಡು ಇಲ್ಲಿ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲವೊಂದನ್ನು ನಗರದ ಮಾಳಮಾರುತಿ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇನ್‌್ಸಪೆಕ್ಟರ್‌ ಬಿ.ಆರ್‌. ಗಡ್ಡೇಕರ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ವೇಳೆ ಯಾವುದೇ ದಾಖಲೆಯಿಲ್ಲದೇ ತೈಲ ಸಾಗಾಣೆೆ ಮಾಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಅಕ್ರಮ ಡೀಸೆಲ್‌ ಸಾಗಿಸುತ್ತಿದ್ದ ಟ್ಯಾಂಕರ್‌ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ತೈಲ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 17 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್‌ ಡೀಸೆಲ್‌ ಮತ್ತು ಟ್ಯಾಂಕರ್‌ ಅನ್ನು ಜಪ್ತಿ ಮಾಡಲಾಗಿದೆ. ನಿನ್ನೆಯಷ್ಟೇ ಇಲ್ಲಿನ ಕರಾವಳಿಯ ಸಮುದ್ರದ ಮಧ್ಯದಲ್ಲಿ ಮುಂಬೈ ಕಸ್ಟಮ್ಸೌ ಪಡೆ ಒಂದು ಸರಕು ಸಾಗಿಸುವ ಹಡಗನ್ನು ತಡೆದು ಪರಿಶೀಲಿಸಿದಾಗ ನೀರಿನ ಟ್ಯಾಂಕ್‌ಗಳಲ್ಲಿ 180 ಟನ್‌ಗಳಿಗೂ ಹೆಚ್ಚು ಕಳ್ಳಸಾಗಣೆ ಡೀಸೆಲ್‌ಪತ್ತೆ ಮಾಡಿ ಹಡಗಿನ ಮಾಸ್ಟರ್‌ ಮತ್ತು ಅದರ ಮಾಲೀಕರ ಮಗನನ್ನು ಬಂಧಿಸಿದ್ದರು.

ಇನ್ನೂ ತುಮಕೂರು ಮೂಲದ ಟ್ಯಾಂಕರ್‌ ಮಾಲೀಕ ಅರಿಹಂತ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗಲ್‌್ಫ ರಾಷ್ಟ್ರಗಳಿಂದ ಅಕ್ರಮವಾಗಿ ತೈಲ ಸಾಗಾಟ ಮಾಡುತ್ತಿದ್ದುದು ಗೊತ್ತಾಗಿದೆ. ವಿಚಾರಣೆ ವೇಳೆ ಸ್ಮಗ್ಲಿಂಗ್‌ ಜಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನದವರು ಭಾಗಿಯಾಗಿರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News