Homeಬೆಂಗಳೂರುಬಿಎಂಟಿಸಿ ಬಸ್‌‍ನಲ್ಲಿ ಮೊಬೈಲ್‌ ಸ್ಪೀಕರ್‌ ಹಾಕಿದರೆ ಕೆಳಗಿಳಿಸುವುದು ಗ್ಯಾರಂಟಿ

ಬಿಎಂಟಿಸಿ ಬಸ್‌‍ನಲ್ಲಿ ಮೊಬೈಲ್‌ ಸ್ಪೀಕರ್‌ ಹಾಕಿದರೆ ಕೆಳಗಿಳಿಸುವುದು ಗ್ಯಾರಂಟಿ

ಬೆಂಗಳೂರು,ಅ.12-ಬಿಎಂಟಿಸಿ ಬಸ್‌‍ಗಳಲ್ಲಿ ಪ್ರಯಾಣಿಕರು ತಮ ಮೊಬೈಲ್‌ ಸ್ಪೀಕರ್‌ನಲ್ಲಿ ಜೋರಾಗಿ ಹಾಡುಗಳನ್ನು ಕೇಳುವುದಾಗಲೀ ಅಥವಾ ರೀಲ್ಸ್ ನೋಡುತ್ತಾ ಸಹಪ್ರಯಾಣಿಕರಿಗೆ ತೊಂದರೆ ಕೊಟ್ಟರೆ ತಕ್ಷಣ ಅಂತಹ ಪ್ರಯಾಣಿಕರನ್ನು ಬಸ್‌‍ ನಿಂದ ಕೆಳಗೆ ಇಳಿಸಲಾಗುತ್ತದೆ ಎಚ್ಚರ. ಬಿಎಂಟಿಸಿ ಬಸ್‌‍ಗಳಲ್ಲಿ ಇತ್ತೀಚೆಗೆ ಜೋರಾಗಿ ಹಾಡು ಕೇಳುವುದು, ರೀಲ್‌್ಸ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ತಡೆಯುವ ಉದ್ದೇಶದಿಂದ ಬಿಎಂಟಿಸಿ ಮುಂದಾಗಿದೆ.

ಬಸ್‌‍ನಲ್ಲಿ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಶಬ್ದ ಮಾಡಿದರೆ ನಿರ್ವಹಕರು ಅಥವಾ ಚಾಲಕರು ಮೊದಲು ಬಂದ್‌ ಮಾಡಲು ಹೇಳುತ್ತಾರೆ. ಮಾತು ಕೇಳದಿದ್ದರೆ ಅಂತಹ ಪ್ರಯಾಣಿಕರನ್ನು ಬಸ್‌‍ನಿಂದ ಕೆಳಗೆ ಇಳಿಸುವಂತೆ ಬಿಎಂಟಿಸಿ ಸೂಚಿಸಿದೆ. ಲೌಡ್‌ಸ್ಪೀಕರ್‌ ಹಾಕುವುದನ್ನು ಸಹಪ್ರಯಾಣಿಕರು ಯಾರಾದರೂ ಪ್ರಶ್ನಿಸಿದರೆ ಉಳಿದವರು ಅವರಿಗೆ ಧ್ವನಿಗೂಡಿಸಬೇಕು.ಅದುಬಿಟ್ಟು ಒಬ್ಬರೇ ಅದನ್ನು ಖಂಡಿಸಿದರೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಸ್‌‍ನಲ್ಲಿ ಮೊಬೈಲ್‌ನಿಂದ ಇತರರಿಗೆ ಕಿರಿಕಿರಿಯಾದರೆ ಅದನ್ನು ಎಲ್ಲರೂ ಪ್ರಶ್ನಿಸಿದರೆ ತಡೆಗಟ್ಟಬಹುದು.

ಈಗಾಗಲೇ ಬಿಎಂಟಿಸಿ ಬಸ್‌‍ಗಳಲ್ಲಿ ಈ ಬಗ್ಗೆ ಸೂಚನಾ ಪಲಕಗಳನ್ನು ಹಾಕಿದ್ದರೂ ಸಹ ಪ್ರಯಾಣಿಕರು ಕ್ಯಾರೆ ಅನ್ನುತ್ತಿಲ್ಲ. ಒಬ್ಬೊಬ್ಬರಂತು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವುದು ಬಸ್‌‍ನಲ್ಲಿದ್ದವರಿಗೆಲ್ಲಾ ಕೇಳಿಸುತ್ತದೆ. ಇದು ಇನ್ನೂ ಕಿರಿಕಿರಿಯೆನಿಸುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಬಸ್‌‍ನೊಳಗೆ ಜಗಳವೇ ನಡೆದು ಹೊಡೆದಾಟವಾಗಿರುವುದನ್ನೂ ಸಹ ನಾವು ನೋಡಿದ್ದೇವೆ. ಹಾಗಾಗಿ ಇತರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್‌ ಬಳಸುವುದು ಒಳ್ಳೆಯದು.

ಮೊಬೈಲ್‌ ಸ್ಪೀಕರ್‌ ಬಳಕೆಯಿಂದಾಗಿ ಬಸ್‌‍ ಚಾಲಕರು, ನಿರ್ವಹಕರು ಹಾಗೂ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ಬಿಎಂಟಿಸಿ ಈ ರೀತಿಯ ನಿರ್ಧಾರಕ್ಕೆ ಬಂದಿದೆ.ಇನ್ನು ಮುಂದೆ ಬಿಎಂಟಿಸಿ ಬಸ್‌‍ಗಳಲ್ಲಿ ಪ್ರಯಾಣಿಸುವವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಇಲ್ಲದಿದ್ದರೆ ಬಸ್‌‍ನಿಂದ ಕೆಳಗೆ ಇಳಿಯಬೇಕಿದೆ ಜೋಕೆ….

RELATED ARTICLES
spot_img

Latest News