Thursday, May 2, 2024
Homeರಾಷ್ಟ್ರೀಯಅ.21ರಂದು ಗಗನಯಾನ ಪರೀಕ್ಷಾ ಹಾರಾಟ

ಅ.21ರಂದು ಗಗನಯಾನ ಪರೀಕ್ಷಾ ಹಾರಾಟ

ಮಧುರೈ, ಅ.15- ಮನುಷ್ಯರನ್ನು ಬಾಹ್ಯಾಕಾಶಯಾನಕ್ಕೆ ರವಾನೆ ಮಾಡುವ ಗಗನಯಾನ ಯೋಜನೆಯ ಪೂರ್ವಭಾವಿ ವಾಹನಗಳ ಪರೀಕ್ಷಾ ಪ್ರಯೋಗ ಅಕ್ಟೋಬರ್ 21ರಂದು ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಗಗನ ಯಾನ್ ಯೋಜನೆಯು ಮಾನವ ಸಿಬ್ಬಂದಿಯನ್ನು 400 ಕಿಮೀ ಕಕ್ಷೆಗೆ ಉಡಾವಣೆ ಮಾಡುವ ಮತ್ತು ವಾಪಾಸ್ ಮರಳಿದ ವೇಳೆ ಸಮುದ್ರದ ನೀರಿನಲ್ಲಿ ಇಳಿಸಿ ಸುರಕ್ಷಿತವಾಗಿ ಭೂಮಿಗೆ ತರುವ ಯೋಜನೆಯಾಗಿದೆ. ಇದಕ್ಕಾಗಿ ಮಾನವ ಬಾಹ್ಯಾಕಾಶ ಹಾರಾಟದ ಸಾಮಥ್ರ್ಯದ ಪ್ರದರ್ಶನ ಪರೀಕ್ಷೆಗೆ ಮೂರು ವಾಹನಗಳ ಪರೀಕ್ಷಾ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಮಾನವ ಬಾಹ್ಯಾಕಾಶ ಯಾನದ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಇರಿಸಲು ನಿಗದಿಪಡಿಸಲಾದ ಸಿಬ್ಬಂದಿ ಮಾಡ್ಯೂಲ್ ಅನ್ನು ಪರೀಕ್ಷಿಸಲು ಪರೀಕ್ಷಾ ವಾಹನ ಅಭಿವೃದ್ಧಿ ಹಾರಾಟವನ್ನು (ಟಿವಿ-ಡಿ1) ನಡೆಸಲಾಗುವುದು.

ಗಗನ್ಯಾನ್ ಮಿಷನ್‍ನ ಮೊದಲ ಪರೀಕ್ಷಾ ವಾಹನ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಾಗುವುದು. ಅದರ ನಂತರ ನಾವು ಇನ್ನೂ ಮೂರು ಪರೀಕ್ಷಾ ಕಾರ್ಯಾಚರಣೆಗಳು ನಡೆಯಲಿವೆ. ಡಿ 2, ಡಿ 3, ಡಿ 4. ನಾವು ಪರೀಕ್ಷಾ ಹಾರಾಟದ ಅನುಕ್ರಮದಲ್ಲಿ ಸಂಪೂರ್ಣ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಟಿವಿ-ಡಿ1 ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆಯಾದ ಬಳಿಕ ಮರಳಿ ಬಂಗಾಳ ಕೊಲ್ಲಿಯಲ್ಲಿ ಭೂಮಿಗೆ ಬರುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಸ್ರೋದ ಬೆಂಗಳೂರಿನ ಪ್ರಧಾನ ಕಛೇರಿಯಲ್ಲಿ ಬಾಹ್ಯಾಕಾಶ ಸಂಸ್ಥೆಯು ಅಕ್ಟೋಬರ್ 21 ರಂದು ಶ್ರೀಹರಿಕೋಟಾದಲ್ಲಿ ಗಗನಯಾನ ಮೊದಲ ಮಿಷನ್‍ಗೆ ಮುಂಚಿತವಾಗಿ ಹಲವಾರು ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ ಎಂದು ಹೇಳಿದರು.

ಇ¸ಶ್ರೋ ಕೈಗೊಂಡಿರುವ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಕಾರ್ಯಕ್ರಮದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸೋಮನಾಥ್, 2024 ರ ಜನವರಿ ಮಧ್ಯದಲ್ಲಿ ಬಾಹ್ಯಾಕಾಶ ನೌಕೆಯು ಲಗ್ರೇಂಜ್ ಪಾಯಿಂಟ್ (ಎಲ್ 1) ತಲುಪುತ್ತದೆ ಎಂದು ಹೇಳಿದ್ದಾರೆ. ನಾವು ಅದನ್ನು ಎಲ್ 1 ಪಾಯಿಂಟ್‍ನಲ್ಲಿ ಸೇರಿಸುತ್ತೇವೆ ಮತ್ತು ಆ ಹಂತದಿಂದ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

RELATED ARTICLES

Latest News