Friday, May 17, 2024
Homeರಾಷ್ಟ್ರೀಯಎನ್‍ಸಿಪಿ ಮಾಜಿ ಸಂಸದನ 315 ಕೋಟಿ ಮೌಲ್ಯದ ಅಸ್ತಿ ಜಪ್ತಿ

ಎನ್‍ಸಿಪಿ ಮಾಜಿ ಸಂಸದನ 315 ಕೋಟಿ ಮೌಲ್ಯದ ಅಸ್ತಿ ಜಪ್ತಿ

ನವದೆಹಲಿ, ಅ.15- ಮಹಾರಾಷ್ಟ್ರದ ಎನ್‍ಸಿಪಿಯ ಮಾಜಿ ಸಂಸದರ ವಿರುದ್ಧ ನಡೆಸಿದ ಕಾರ್ಯಚರಣೆಯಲ್ಲಿ 315 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂಮಿ, ಕೈಗಾರಿಕೆಗಳು, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ (77) ಅವರು, ರಾಜಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಆರ್.ಎಲ್.ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಮನರಾಜ್ ಜ್ಯುವೆಲ್ಲರ್ಸ್‍ನ ಪ್ರವರ್ತಕರಾಗಿದ್ದಾರೆ.

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಮಹರಾಷ್ಟ್ರದ ಜಲಗಾಂವ್, ಮುಂಬೈ, ಥಾಣೆ, ಸಿಲ್ಲೋಡ್, ಔರಂಗಾಬಾದ್‍ನಲ್ಲಿ ಮತ್ತು ಗುಜರಾತ್‍ನ ಕಚ್‍ನಲ್ಲಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ 70 ಸ್ಥಿರ ಆಸ್ತಿಗಳನ್ನುಮನಿಲ್ಯಾಂಡರಿಂಗ್ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ರಾಜ್ಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್‍ನ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕೆಲವು ವಿಂಡ್‍ಮಿಲ್‍ಗಳು, ಬೆಳ್ಳಿ ಮತ್ತು ವಜ್ರದ ಆಭರಣಗಳು, ಬೆಳ್ಳಿ ಮತ್ತು ಭಾರತೀಯ ಕರೆನ್ಸಿ ಸೇರಿ ಒಟ್ಟು 315.60 ಕೋಟಿ ರೂ. ಜಪ್ತಿ ಮಾಡಲಾಗಿದೆ.

ಪ್ರವರ್ತಕರಾದ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ, ಮನೀಶ್ ಈಶ್ವರಲಾಲ್ ಜೈನ್ ಲಾಲ್ವಾನಿ ಮತ್ತು ಇತರರು ಸಂಪಾದಿಸಿದ ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಕಂಪನಿಗಳು ಮತ್ತು ಅದರ ನಿರ್ದೇಶಕರು, ಪ್ರವರ್ತಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 352.49 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇಡಿ ಆಗಸ್ಟ್‍ನಲ್ಲಿ ದಾಳಿ ನಡೆಸಲಾಗಿತ್ತು.

RELATED ARTICLES

Latest News