Monday, May 20, 2024
Homeಕ್ರೀಡಾ ಸುದ್ದಿಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಅಹಮದಾಬಾದ್, ಅ.15- ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಸೋಲು ಕಂಡಿರುವ ಪಾಕಿಸ್ತಾನದ ಆಟಗಾರರನ್ನು ಮಾಜಿ ನಾಯಕ ರಮೀಜ್ ರಾಜಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 1992ರಿಂದ ಇಂಡೋ- ಪಾಕ್ ನಡುವೆ ವಿಶ್ವಕಪ್ ಕದನ ಆರಂಭವಾಗಿದ್ದು, ಅಹಮದಾಬಾದ್‍ನ ಪಂದ್ಯಕ್ಕೂ ಮುನ್ನ ಪಾಕ್ 7-0 ಹಿನ್ನೆಡೆ ಅನುಭವಿಸಿತ್ತು. ಆದರೆ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ್ದ ಬಾಬರ್ ಆಝಮ್ ಪಡೆಯು ಈ ಬಾರಿ ಟೀಮ್ ಇಂಡಿಯಾವನ್ನು ಮಣಿಸಿ ಅಂತರವನ್ನು 7-1ಕ್ಕೆ ತಗ್ಗಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ಪಂದ್ಯದ ಯಾವುದೇ ಹಂತದಲ್ಲಿ ಹೋರಾಟದ ಪ್ರವೃತ್ತಿ ತೋರದೆ ಸೋಲಿನ ಹಂತವನ್ನು 8-0ಕ್ಕೆ ಹೆಚ್ಚಿಸಿಕೊಂಡ ಬೆನ್ನಲ್ಲೇ ಪಾಕ್‍ನ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್, ವಾಸಿಮ್ ಅಕ್ರಮ್ ಸೇರಿದಂತೆ ಕೆಲವು ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಛೇಡಿಸಿದ್ದರು. ಈಗ ಈ ಸಾಲಿಗೆ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಕೂಡ ಸೇರ್ಪಡೆಗೊಂಡಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

`ನೀವು ಟೀಮ್ ಇಂಡಿಯಾ ವಿರುದ್ಧ ಆಡುವಾಗ ನಿಸ್ಸಂಶಯವಾಗಿ, ಇದು ಶೇಕಡಾ 99ರಷ್ಟು ಭಾರತದ ಅಭಿಮಾನಿಗಳು ಮತ್ತು ಜನಸ್ತೋಮದಿಂದ ಕೂಡಿರುವಂತಹ ವಾತಾವರಣವಾಗಿರುತ್ತದೆ. ನೀವು ಅದರಲ್ಲಿ ಮುಳುಗಿದ್ದೀರಿ. ನನಗೆ ಇದೆಲ್ಲವೂ ಅರ್ಥವಾಗುತ್ತದೆ. ಆದರೆ ಬಾಬರ್ ಆಝಮ್ ಈ ತಂಡವನ್ನು 4-5 ವರ್ಷಗಳಿಂದ ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಹೀಗಾಗಿ ಅವರು ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗಿದೆ. ನೀವು ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಹೋರಾಟ ನೀಡಿ, ಪಾಕಿಸ್ತಾನಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ’ ಎಂದು ರಮೀಜ್ ರಾಜಾ ಕಿಡಿಕಾರಿದರು.

RELATED ARTICLES

Latest News