Monday, May 20, 2024
Homeಕ್ರೀಡಾ ಸುದ್ದಿಶಾಹೀನ್ ಶಾ ಆಫ್ರಿದಿಗೆ ರವಿಶಾಸ್ತ್ರಿ ಹಿಗ್ಗಾಮುಗ್ಗಾ ಕ್ಲಾಸ್

ಶಾಹೀನ್ ಶಾ ಆಫ್ರಿದಿಗೆ ರವಿಶಾಸ್ತ್ರಿ ಹಿಗ್ಗಾಮುಗ್ಗಾ ಕ್ಲಾಸ್

ಅಹಮದಾಬಾದ್, ಅ.15- 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯ ಟೀಮ್ ಇಂಡಿಯಾದ ಪಂದ್ಯದಲ್ಲಿ 6 ಓವರ್‍ಗಳಲ್ಲಿ 36 ರನ್ ಕೊಟ್ಟು 2 ವಿಕೆಟ್ ಪಡೆದಿದ್ದ ಪಾಕಿಸ್ತಾನದ ವೇಗಿ ಶಾಹಿನ್ ಶಾ ಆಫ್ರಿದಿ ಬೌಲಿಂಗ್ ಅನ್ನು ಮಾಜಿ ನಾಯಕ ರವಿಶಾಸ್ತ್ರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿ0ದ್ದಾರೆ.

ನಸೀಮ್ ಶಾ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ತಂಡದ ವೇಗ ಬೌಲಿಂಗ್ ಹೊಣೆಯನ್ನು ಸಂಪೂರ್ಣವಾಗಿ ವಹಿಸಿಕೊಂಡಿರುವ ಶಾಹಿನ್ ಶಾ ಆಫ್ರಿದಿ ಅವರು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ 2ನೇ ಓವರ್‍ನಲ್ಲೇ ಶುಭಮನ್ ಗಿಲ್ ಅವರ ವಿಕೆಟ್ ಪಡೆದು ಗಮನ ಸೆಳೆದರು.

ಆದರೆ 192 ರನ್‍ಗಳ ಗುರಿಯನ್ನು ಹಿಂಬಾಲಿಸಿದ್ದ ಟೀಮ್ ಇಂಡಿಯಾ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಶರ್ಮಾ ಶತಕದ ಅಂಚಿನತ್ತ ಸಾಗುತ್ತಿದ್ದಾಗಲೇ ಅಫ್ರಿದಿ ಹಿಟ್‍ಮ್ಯಾನ್‍ನ ವಿಕೆಟ್ ಪಡೆದು ಗಮನ ಸೆಳೆದರು..

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಆದರೆ ಗಾಯದ ಸಮಸ್ಯೆಗೆ ಪದೇ ಪದೇ ಒಳಗಾಗುತ್ತಿರುವ ಪಾಕ್ ವೇಗಿ ಶಾಹಿನ್ ಶಾ ಅಫ್ರಿದಿ ಅವರು ಎಂದೆಂದಿಗೂ ವಿಶ್ವಕಪ್ ವಿಜೇತ ಬೌಲರ್ ವಾಸಿಮ್ ಅಕ್ರಮ್ ಅವರ ಸಾಧನೆಯ ಸಮೀಪಕ್ಕೂ ತಲುಪಲಾರರು ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

`ಶಾಹಿನ್ ಶಾ ಅಫ್ರಿದಿ ಅವರು ಉತ್ತಮ ಬೌಲರ್ ಆಗಿದ್ದು, ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯಬಲ್ಲರು. ಆದರೆ ನೀವು ಅದನ್ನು ಒಪ್ಪಿಕೊಳ್ಳಲೇಬೇಕು, ನಸೀಮ್ ಶಾ ಆಡುತ್ತಿಲ್ಲ ಮತ್ತು ಪಾಕಿಸ್ತಾನದ ಸ್ಪಿನ್ ಬೌಲಿಂಗ್‍ನ ಗುಣಮಟ್ಟ ಹೀಗಿದ್ದರೆ, ಶಾಹೀನ್ ವಾಸೀಮ್ ಅಕ್ರಮ್ ಅಲ್ಲ. ಅವರು ಉತ್ತಮ ಬೌಲರ್, ಆದರೆ ನಾವು ಅವರನ್ನು ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ. ಒಬ್ಬ ಆಟಗಾರನು ಕೇವಲ ಉತ್ತಮ ಆಟಗಾರನಾಗಿದ್ದರೆ, ಅವನು ಉತ್ತಮ ಆಟಗಾರ ಎಂದು ಹೇಳುವುದಕ್ಕೆ ನಾವು ನಮ್ಮ ಹೊಗಳಿಕೆಯನ್ನು ನಿರ್ಬಂಧಿಸಬೇಕು. ಅವರು ಶ್ರೇಷ್ಠ ಆಟಗಾರನಲ್ಲ, ನಾವು ಅದನ್ನು ಒಪ್ಪಿಕೊಳ್ಳಬೇಕು’ ಎಂದು 1983 ರ ವಿಶ್ವಕಪ್ ವಿಜೇತ ಆಟಗಾರ ಹೇಳಿದ್ದಾರೆ.

RELATED ARTICLES

Latest News