Thursday, May 2, 2024
Homeರಾಷ್ಟ್ರೀಯಗುಜರಾತ್‍ನ ಕರಾವಳಿಯಲ್ಲಿ ಬರೋಬ್ಬರಿ 3,300 ಕೆಜಿ ಡ್ರಗ್ಸ್ ವಶ

ಗುಜರಾತ್‍ನ ಕರಾವಳಿಯಲ್ಲಿ ಬರೋಬ್ಬರಿ 3,300 ಕೆಜಿ ಡ್ರಗ್ಸ್ ವಶ

ಪೋರಬಂದರ್, ಫೆ 28- ಗುಜರಾತ್‍ನ ಕರಾವಳಿಯಲ್ಲಿ ಭಾರತೀಯ ನೌಕಾಪಡೆ ಮತ್ತು ಎನ್‍ಸಿಬಿ ಜಂಟಿ ಕಾರ್ಯಾಚರಣೆ ಯಲ್ಲಿ ಐವರನ್ನು ಬಂಧಿಸಿ 3,300 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ ಡ್ರಗ್ಸ್‍ನಲ್ಲಿ 3,089 ಕಿಲೋಗ್ರಾಂ ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಸೇರಿವೆ, ಬಂಧಿತರನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ನೌಕಾಪಡೆಯು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದೊಂದಿಗೆ ಸಂಯೋಜಿತ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಧೋಣಿಯನ್ನು ವಶಪಡಿಸಿಕೊಂಡಿದೆ.

ಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ

ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ,ಎನ್‍ಸಿಬಿಯೊಂದಿಗೆ ಭಾರತೀಯ ನೌಕಾಪಡೆಯ ಮಿಷನ್ ಸಹಕಾರಿ ಪ್ರಯತ್ನಗಳ ಮೂಲಕ ಸಾಧ್ಯವಾಯಿತು. ನಿಷಿದ್ಧ ವಸ್ತುವಿನ ಬೆಲೆಯನ್ನು ಅಧಿಕಾರಿಯು ನಿರ್ದಿಷ್ಟಪಡಿಸಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಚರಸ್ ಬೆಲೆ 7 ಕೋಟಿ ರೂ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ನಿರ್ದಿಷ್ಟ ಸುಳಿವು ಆಧರಿಸಿ ಅರಬ್ಬಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ಬಳಿ ಕಾರ್ಯಾಚರಣೆ ನಡೆಸಲಾಗಿದೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿಯೊಬ್ಬರು ರಾಜ್ಯ ಕರಾವಳಿಯ ಮಧ್ಯ ಸಮುದ್ರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೋಣಿಯಿಂದ ಚರಸ್ (ಹಶಿಶ್) ಸೇರಿದಂತೆ ವಿವಿಧ ರೀತಿಯ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

RELATED ARTICLES

Latest News