Thursday, December 12, 2024
Homeಕ್ರೀಡಾ ಸುದ್ದಿ | Sportsರಣಜಿ : ಕರ್ನಾಟಕಕ್ಕೆ 6 ರನ್‍ಗಳ ರೋಚಕ ಸೋಲು

ರಣಜಿ : ಕರ್ನಾಟಕಕ್ಕೆ 6 ರನ್‍ಗಳ ರೋಚಕ ಸೋಲು

ಅಹಮದಾಬಾದ್, ಜ.15- ಗುಜರಾತ್ ತಂಡದ ಯುವ ವೇಗಿ ಸಿದ್ಧಾರ್ಥ್ ದೇಸಾಯ್ (42ಕ್ಕೆ 7) ಅವರ ಮಾರಕ ದಾಳಿಗೆ ಸಿಲುಕಿದ ಕರ್ನಾಟಕ ತಂಡವು ರಣಜಿ ಟೂರ್ನಿಯ ಪಂದ್ಯದಲ್ಲಿ 6 ರನ್‍ಗಳ ವಿರೋಚಿತ ಸೋಲು ಕಂಡಿದೆ. 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ದ ಗುಜರಾತ್‍ನ ಪರ ಇಂದು ಬೆಳಗ್ಗೆ ಬ್ಯಾಟಿಂಗ್ ಆರಂಭಿಸಿದ ಮಧ್ಯಮ ಕ್ರಮಾಂಕದ ಆಟಗಾರ ಉಮಾಂಗ್ ಕುಮಾರ್ (57 ರನ್) ಕರ್ನಾಟಕ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿ ಆಕರ್ಷಕ ಅರ್ಧಶತಕ ಸಿಡಿಸಿದರು.

ಉಮಾಂಗ್‍ಗೆ ಉತ್ತಮ ಜೊತೆಯಾಟ ನೀಡಿದ ನಾಯಕ ಚಿಂತನ್‍ಗಜಾ (23 ರನ್) ಗಳಿಸಿ ತಂಡ 219 ರನ್ ಗಳಿಸಲು ನೆರವಾದರು. ಕರ್ನಾಟಕದ ಪರ ವಾಸುಕಿ ಕೌಶಿಕ್ ಹಾಗೂ ರೋಹಿತ್ ಕುಮಾರ್ 3 ವಿಕೆಟ್ ಪಡೆದು ಗಮನ ಸೆಳೆದರು. ಮೊದಲ ಇನ್ನಿಂಗ್ಸ್‍ನಲ್ಲಿ 110 ರನ್‍ಗಳ ಮುನ್ನಡೆ ಗಳಿಸಿದ್ದ ಮಯಾಂಕ್ ಅಗರ್ವಾಲ್ ಪಡೆ ಪಂದ್ಯ ಗೆಲ್ಲಲು 110 ರನ್‍ಗಳ ಸಾಧಾರಣ ಗುರಿ ಪಡೆಯಿತು. ಆದರೆ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಸಿದ್ಧಾಂತ್ ದೇಸಾಯ್ (7 ವಿಕೆಟ್) ಹಾಗೂ ರಿಂಕೇಶ್ ವಾಗೇಲಾ (3ವಿಕೆಟ್)ರ ಬೌಲಿಂಗ್ ದಾಳಿಗೆ ನಲುಗಿ 103 ರನ್‍ಗಳಿಗೆ ಅಲೌಟ್ ಆಗುವ ಮೂಲಕ 6 ರನ್‍ಗಳ ಸೋಲು ಕಂಡಿತು.

10th, ITI ಪಾಸಾದವರಿಗೆ ವಾಯುವ್ಯ ರೈಲ್ವೆಯಲ್ಲಿ ಉದ್ಯೋಗಾವಕಾಶ

ಕರ್ನಾಟಕ ಪರ ದೇವದತ್ ಪಡಿಕ್ಕಲ್ (31 ರನ್), ಸುಭಾಂಗ್‍ಹೆಗಡೆ (27 ರನ್) ಹಾಗೂ ಮಯಾಂಕ್ ಅಗರ್ವಾಲ್ (19 ರನ್) ಬಿಟ್ಟರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟುವಲ್ಲಿ ವಿಫಲರಾದರು.

RELATED ARTICLES

Latest News