Wednesday, September 18, 2024
Homeಇದೀಗ ಬಂದ ಸುದ್ದಿಮೈತ್ರಿ ವಿಚಾರವನ್ನು ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ : ಹೆಚ್ಡಿಕೆ ಸ್ಪಷ್ಟನೆ

ಮೈತ್ರಿ ವಿಚಾರವನ್ನು ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ : ಹೆಚ್ಡಿಕೆ ಸ್ಪಷ್ಟನೆ

ಬೆಂಗಳೂರು,ಸೆ.27-ಬಿಜೆಪಿಯೊಂದಿಗಿನ ಮೈತ್ರಿಗೆ ಸಂಬಂಧಿಸಿದ ಯಾವುದೇ ವಿವರವನ್ನು ಜೆಡಿಎಸ್ ಅಧ್ಯಕ್ಷ ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಇಬ್ರಾಹಿಂ ಗಮನಕ್ಕೆ ತರಲಾಗಿದೆ ಎಂದರು.

ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ ಸಮಸ್ತ ಕರ್ನಾಟಕದ ರಕ್ಷಣೆ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಎಲ್ಲ ಸಮುದಾಯದ ರಕ್ಷಣೆ ಮಾಡುತ್ತೇವೆ. 2004ರಿಂದಲೂ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿದೆ. ಕಳೆದ 60 ವರ್ಷದಿಂದ ದೇವೇಗೌಡರು ಜಾತ್ಯತೀತ ಶಕ್ತಿಯನ್ನು ಉಳಿಸಲು ಹೋರಾಟ ಮಾಡುತ್ತಾ ಬಂದರು. ಆದರೆ ಕಾಂಗ್ರೆಸ್ನವರು ಮಾಡಿದ್ದೇನು? ಅಲ್ಪಸಂಖ್ಯಾತರ ಬಗ್ಗೆ ಯಾವತ್ತೂ ಅಗೌರವಯುತವಾಗಿ ನಡೆದುಕೊಂಡಿಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ ಮತ ಹಾಕುತ್ತಿರಲಿಲ್ಲ. ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೋರಾಟವಿತ್ತು. 8 ತಿಂಗಳ ಕಾಲ ಪಂಚರತ್ನ ಕಾರ್ಯಕ್ರಮವನ್ನು ಜನರ ಮುಂದಿಟ್ಟು ಮತಯಾಚಿಸಿದರೂ ಜನರು ಮತ ಕೊಡಲಿಲ್ಲ. ಕಾವೇರಿ, ಕೃಷ್ಣ ವಿಚಾರದಲ್ಲಿ ದೇವೇಗೌಡರು ನೀಡಿರುವ ಕೊಡುಗೆ ಎಷ್ಟು? ಮತ್ತೊಬ್ಬರು ನೀಡಲು ಸಾಧ್ಯವಿಲ್ಲ. ಕಾವೇರಿ ಭಾಗದಲ್ಲಿ ರೈತರು ಉಳಿದಿದ್ದರೆ ಅದು ದೇವೇಗೌಡರಿಂದ ಮತ್ತು ಜೆಡಿಎಸ್ನಿಂದ ಮಾತ್ರ ಎಂದರು.

ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಕಾಲು ಹಿಡಿಯುವ ದುರ್ಗತಿ ಜೆಡಿಎಸ್ಗೆ ಬಂದಿಲ್ಲ. ನಿಮ್ಮ ರಾಷ್ಟ್ರ ನಾಯಕರು ದೇವೇಗೌಡರ ಕಾಲು ಹಿಡಿಲು ಬಂದಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.

ರಾಜಸಭೆಯಲ್ಲಿ ಕಾವೇರಿ ಬಗ್ಗೆ ಏಕಾಂಗಿಯಾಗಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಏಕೆ ಮಾತನಾಡಲಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸ್ಸು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಮೆಟ್ಟೂರು ಜಲಾಶಯದಲ್ಲಿ 11 ಟಿಎಂಸಿ ಅಡಿ ನೀರಿದೆ. 7,231 ಕ್ಯೂಸೆಕ್ ಒಳ ಹರಿವಿದ್ದರೆ, ಆರೂವರೆ ಸಾವಿರ ಕ್ಯೂಸೆಕ್ ಹೊರ ಹರಿವಿದೆ.ಕೆಆರ್ಎಸ್ಗೆ ಮಳೆಯಾಗಿದ್ದರಿಂದ 7 ಸಾವಿರ ಕ್ಯೂಸೆಕ್ನಷ್ಟು ನೀರು ಬರುತ್ತಿತ್ತು. ಈಗ 5 ಸಾವಿರ ಕ್ಯೂಸೆಕ್ಸ್ಗೆ ಇಳಿದಿದೆ. ನಾವು ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ನವರೇ ವಿಷಯಾಂತರ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ಸಾಕಷ್ಟು ವಿಸ್ತರಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವ ಮುನ್ನ ನಡೆದ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ನವರೇ ಸಿಎಂ ಆಗಲಿ ಎಂದು ಬಲವಂತ ಮಾಡಿದ್ದರು. ಅಂದೇ ಕೇಂದ್ರ ಗೃಹಸಚಿವ ಅಮಿತ್ ಷಾ ದೂರವಾಣಿ ಮಾಡಿ ಬಿಜೆಪಿ ಜೊತೆ ಸರ್ಕಾರ ಮಾಡುವಂತೆ ಆಹ್ವಾನ ನೀಡಿದ್ದರು. ಆಗ ಹೋಗಿದ್ದರೆ 5 ವರ್ಷ ಸರ್ಕಾರ ಇರುತ್ತಿತ್ತು. ಮೈತ್ರಿ ಹೆಸರಿನಲ್ಲಿ ದೇವೇಗೌಡರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದೆ ಎಂದರು.

ಮೈತ್ರಿ ಸರ್ಕಾರ ಪತನವಾಗುವ ಮುನ್ನ ಬಿಜೆಪಿಯ 5 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಒಂದು ವೇಳೆ ಆ 5 ಶಾಸಕರು ರಾಜೀನಾಮೆ ಕೊಟ್ಟರೆ, ನಮ್ಮ ಪಕ್ಷದ ಮತ್ತೈದು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಹೀಗೆ ಕಾಂಗ್ರೆಸ್ ಜಾತ್ಯತೀತ ಶಕ್ತಿಯನ್ನು ಉಳಿಸುವ ಬದಲು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

RELATED ARTICLES

Latest News