Saturday, May 4, 2024
Homeರಾಷ್ಟ್ರೀಯಇಡಿ ಮುಚ್ಚಿದರೆ ಬಿಜೆಪಿ ತೊರೆಯಲಿದ್ದಾರೆ ಘಟಾನುಘಟಿ ನಾಯಕರು : ಕೇಜ್ರಿ

ಇಡಿ ಮುಚ್ಚಿದರೆ ಬಿಜೆಪಿ ತೊರೆಯಲಿದ್ದಾರೆ ಘಟಾನುಘಟಿ ನಾಯಕರು : ಕೇಜ್ರಿ

ನವದೆಹಲಿ,ಫೆ.19-ಜಾರಿ ನಿರ್ದೇಶನಾಲಯ ಮುಚ್ಚಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 45 ಅನ್ನು ರದ್ದುಗೊಳಿಸಿದರೆ ಬಿಜೆಪಿಯ ಹಿರಿಯ ನಾಯಕರಾಗಿ ಶಿವರಾಜ್ ಚೌಹಾಣ್ ಹಾಗೂ ವಸುಂಧರಾ ರಾಜೇ ಅವರು ತಮ್ಮದೇ ಆದ ಹೊಸ ಪಕ್ಷಗಳನ್ನು ಸ್ಥಾಪಿಸಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಎಎಪಿ ನಾಯಕ ಈ ಹೇಳಿಕೆ ನೀಡಿದ್ದಾರೆ. ವರದಿಗಳ ಪ್ರಕಾರ, ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಅನುಪಾತದ ಬಗ್ಗೆ ಚರ್ಚಿಸಲು ನಾಯಕರು ಸಭೆ ನಡೆಸಿದರು. ಕೇಜ್ರಿವಾಲ್ ಅವರು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಮುರ್ಮು ಸೊರೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಡಿ ಬಂಧಿಸಿರುವ ಜೈಲಿನಲ್ಲಿರುವ ನಾಯಕನಿಗೆ ಅವರು ಬೆಂಬಲ ಘೋಷಿಸಿದ್ದಾರೆ.

ಪಪುವಾ ನ್ಯೂಗಿನಿಯಲ್ಲಿ ಮಾರಣಹೋಮ, 53 ಮಂದಿಯ ಹತ್ಯೆ

ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ ಕಲ್ಪನಾ ಅವರು ತಮ್ಮ ಬೆಂಬಲವನ್ನು ವಿಸ್ತರಿಸಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇಂದು ನಾನು ದೆಹಲಿಯ ಗೌರವಾನ್ವಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಈ ಸಮಯದಲ್ಲಿ ಅವರು ಹೇಮಂತ್ ಜಿ ಮತ್ತು ಜೆಎಂಎಂ ಕುಟುಂಬದೊಂದಿಗೆ ಇರುವುದಕ್ಕೆ ಅರವಿಂದ್ ಜಿ ಅವರಿಗೆ ಧನ್ಯವಾದಗಳು ಎಂದು ಅವರು ಹಿಂದಿಯಲ್ಲಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ಹೇಮಂತ್ ಸೊರೆನ್ ಅವರ ಪತ್ನಿ, ಜಾರ್ಖಂಡ್, ದೆಹಲಿ ಮತ್ತು ಯಾವುದೇ ಬಿಜೆಪಿಯೇತರ ಸರ್ಕಾರವು ಆಳುವ ಇತರ ರಾಜ್ಯಗಳಲ್ಲಿ ಬಿಜೆಪಿ ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದರು.

ಕಮಲ್‍ನಾಥ್ ಕಾಂಗ್ರೆಸ್ ಬಿಡಲ್ಲ : ಜಿತು ಪಟ್ವಾರಿ

ಕಲ್ಪನಾ ಜೀ, ನಾವು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಜಿ ಅವರೊಂದಿಗೆ ನಿಂತಿದ್ದೇವೆ. ಬಿಜೆಪಿಯ ದೌರ್ಜನ್ಯವನ್ನು ಎದುರಿಸುತ್ತಿರುವ ಅವರ ಧೈರ್ಯವನ್ನು ಇಡೀ ದೇಶವೇ ಹೊಗಳುತ್ತದೆ, ಅವರು ಇಂದು ಬಿಜೆಪಿಯೊಂದಿಗೆ ಹೋಗಿದ್ದರೆ ಜೈಲು ಪಾಲಾಗುತ್ತಿರಲಿಲ್ಲ. ಆದರೆ ಅವರು ಬಿಡಲಿಲ್ಲ. ಸತ್ಯದ ಮಾರ್ಗ ಅನುಸರಿಸಿದ್ದಾರೆ ಅವರಿಗೆ ನಮಸ್ಕಾರ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Latest News