Sunday, May 5, 2024
Homeಮನರಂಜನೆಸಸ್ಪೆನ್ಸ್ ಥ್ರಿಲ್ಲರ್ 'ಶಾಖಾಹಾರಿ'

ಸಸ್ಪೆನ್ಸ್ ಥ್ರಿಲ್ಲರ್ ‘ಶಾಖಾಹಾರಿ’

ಈ ವಾರ ಅನೇಕ ಚಿತ್ರಗಳು ಒಮ್ಮೆಲೆ ತೆರಿಗೆ ಬಂದು ಒಂದಿಷ್ಟು ಚಿತ್ರಗಳು ಮನರಂಜಿಸುವಲ್ಲಿ ಯಶಸ್ವಿಯಾವು ಅದರಲ್ಲಿ “ಶಾಖಾಹಾರಿ”. ಬೆರೆಯದೆ ಸ್ಕ್ರೀನ್ ಪ್ಲೇ ಎಂದಿಗೆ ಪ್ರೇಕ್ಷಕರ ಮುಂದೆ ಬಂದು ವಿಭಿನ್ನತೆಯನ್ನು ಮೆರೆದಿದೆ. ಸುಂದರ ಮಲೆನಾಡಿನ ಪರಿಸರದ ನಡುವೆ ಇರುವ ಶ್ರೀ ದುರ್ಗಾ ಪ್ರಸಾದ್ ಶಾಖಾಹಾರಿ ಹೋಟಲಿನ ಮಾಲೀಕ ಚಿತ್ರದ ಕಥಾನಾಯಕ ಸುಬ್ರಹ್ಮಣ್ಯ. ಇವರು ತಿಂಡಿ ಊಟಕ್ಕೆ ತುಂಬಾ ಫೇಮಸ್. ಎಲ್ಲವೂ ಸರಿಯಾಗಿ ಹೋಗುತ್ತಿರುವಾಗ ಅದೇ ಊರಿನ ಪೊಲೀಸ್ ಸ್ಟೇಷನಲ್ಲಿ ಒಂದು ಕೊಲೆ ನಡೆಯುತ್ತದೆ.

ಅಲ್ಲಿಂದ ಶಾಕಾಹಾರಿ ಚಿತ್ರಣವೇ ಬದಲಾಗುತ್ತದೆ.ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಹೆಂಡತಿಯ ಅನಾರೋಗ್ಯದ ಕಾರಣ ತನ್ನೋರಿಗೆ ವರ್ಗಾವಣೆ ಬಯಸಿರುತ್ತಾನೆ. ಆದರೆ ಕೊಲೆಯ ಒತ್ತಡದ ಕಾರಣ ತನಿಖೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸ್ಟೇಷನ್ ನಲ್ಲಿ ಇದ್ದ ವಿಜಯ್ ತಪ್ಪಿಸಿಕೊಳ್ಳುತ್ತಾನೆ. ಕಾಡಲ್ಲಿ ತಪ್ಪಿಸಿಕೊಂಡಿರುವನಿಗಾಗಿ ತುಂಬಾ ಹುಡುಕಾಟ ನಡೆಯುತ್ತದೆ. ಈ ಸಂದರ್ಭದಲ್ಲಿ ವಿಜಯ್ ಸುಬ್ಬಣ್ಣನ ಹೋಟೆಲ್ ಸೇರುತ್ತಾನೆ.

ವಿಜಯ್ ಹಿಂದೆ ಒಂದು ರೋಚಕ ಕಥೆ ಇರುತ್ತದೆ. ಬಿಎಸ್ಎಫ್ ಯೋಧನಾಗಿ ಸೈನಿಕ ಸೇವೆ ಸಲ್ಲಿಸುತ್ತಿರುವಾಗ ಹೆಂಡತಿ ಸೌಗಂಧಿಕಾ ಬೇರೊಬ್ಬನ ಜೊತೆ ಸರಸಸಲ್ಲಾಪ ನಡೆಸುತ್ತಿರುತ್ತಾಳೆ. ಈ ವಿಷಯ ಗೆಳೆಯರ ಮೂಲಕ ವಿಜಯ್ ಗೆ ಗೊತ್ತಾಗುತ್ತದೆ. ಇದನ್ನು ಹೆಂಡತಿಯ ಬಳಿ ವಿಚಾರಿಸಿದಾಗ ನಿಜ ಬಯಲಾಗುತ್ತದೆ. ಪರಪುರುಷನ ಸಾಂಗತ್ಯಕ್ಕೆ ಒಳಗಾಗಿರುವ ತನ್ನ ಹೆಂಡತಿಯನ್ನು ಮುಗಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತಾನೆ. ತಾನೇ ಕೊಲೆ ಮಾಡಬೇಕೆಂದು ನಿರ್ಧರಿಸುವ ಸಂದರ್ಭದಲ್ಲಿ ಆಕೆ ಕೊಲೆಯಾಗುತ್ತಾಳೆ.

ಪಪುವಾ ನ್ಯೂಗಿನಿಯಲ್ಲಿ ಮಾರಣಹೋಮ, 53 ಮಂದಿಯ ಹತ್ಯೆ

ಇದೆಲ್ಲವನ್ನು ಸುಬ್ಬಣ್ಣನ ಬಳಿ ವಿಜಯ್ ಹೇಳಿಕೊಳ್ಳುತ್ತಾನೆ. ಸುಬ್ಬಣ್ಣ ಈ ಕಥೆಯನ್ನು ಕೇಳಿ ಮುರುಗುತ್ತಾನೆ ಮತ್ತು ಇದರಿಂದ ತಪ್ಪಿಸಲು ಪ್ರಯತ್ನ ಪಡುವಾಗಲೇ ವಿಜಯ್ ಕೂಡ ಕೊನೆಯಾಗುತ್ತಾನೆ. ಚಿತ್ರಕ್ಕೆ ರೋಚಕತ್ತಿರುವ ಸಿಗುವುದೇ ಅಲ್ಲಿ. ಈ ಎರಡು ಕಲೆಗಳು ಕತೆಯ ದಿಕ್ಕನ್ನ ಬದಲಾಯಿಸುತ್ತವೆ. ಇಷ್ಟು ದಿನ ಊಟ, ತಿಂಡಿ, ಪ್ರೀತಿ ವಿಶ್ವಾಸಕ್ಕೆ ಫೇಮಸ್ ಆಗಿದ್ದ ಸುಬ್ಬಣ್ಣ ಕಾಣದ ವಿಷ ವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅಲ್ಲಿಂದ ಇವನ ಬಾಳಲ್ಲಿ ಬಿರುಗಾಳಿ ಎದ್ದು ಮತ್ತೊಂದು ಕೊಲೆಯು ನಡೆದುಹೋಗುತ್ತದೆ. ಇದಕ್ಕೆಲ್ಲ ಯಾರು ಕಾರಣ?, ಕೊಲೆಗಳ ಹಿಂದಿನ ರಹಸ್ಯವೇನು?, ಮುಖ್ಯವಾಗಿ ಶಾಖಾಹಾರಿ ಶೀರ್ಷಿಕೆಗು ಕಥೆಗೂ ಏನು ಸಂಬಂಧ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಚಿತ್ರ ನೋಡಿದಾಗ ಗೊತ್ತಾಗುತ್ತದೆ.

ಈ ಚಿತ್ರದಲ್ಲೂ ನಟ ರಂಗಾಯಣ ರಘು ತಮ್ಮ ನಟನೆಯ ಸಾಮರ್ಥ್ಯವನ್ನು ಮತ್ತೆ ತೆರೆದಿಟ್ಟಿದ್ದಾರೆ . ಚಿತ್ರದುರ್ದಕ್ಕೂ ಪ್ರೇಕ್ಷಕರನ್ನ ಭಾವನಾತ್ಮಕ ಪ್ರಪಂಚಕ್ಕೆ ಕೊಂಡೊಯ್ದು ವಿವಿಧ ಅನುಭೂತಿಗಳಿಗೆ ಕಾರಣರಾಗುತ್ತಾರೆ. ಅಮಾಯಕನನ್ನು ರಕ್ಷಿಸುವಲ್ಲಿ ಆತ ಪಡುವ ತಾಪತ್ರೆಗಳು, ತನ್ನದೆಲ್ಲದ ತಪ್ಪಿಗೆ ಎದುರಿಸಬೇಕಾದ ವಿಚಾರಣಾ ಪರಿ, ಎಲ್ಲಾ ಸಂದರ್ಭಗಳನ್ನು ನೋಡಿದಾಗ ಇದು ರಂಗಾಯಣ ರಘು ಅವರಿಂದ ಮಾತ್ರ ಸಾಧ್ಯ ಎನಿಸಿಬಿಡುತ್ತದೆ. ಮತ್ತೊಬ್ಬ ನಟ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪೊಲೀಸ್ ಅಧಿಕಾರಿಯಾಗಿ, ಅನಾರೋಗ್ಯ ಹೆಂಡತಿಯನ್ನು ಕಾಪಾಡಿಕೊಳ್ಳಲು ಪರದಾಡುವ ರೀತಿ ಅದ್ಭುತವಾಗಿದೆ. ಯುವ ಪ್ರತಿಭೆ ವಿನಯ್ ಕೂಡ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಧಿ ಹೆಗಡೆ ಕೂಡ ಕಥೆಯ ಭಾಗವಾಗಿದ್ದಾರೆ.

ಟ್ರಂಪ್ ಅಧ್ಯಕ್ಷರಾದರೆ ನ್ಯಾಟೋ ಪತನ : ನಿಕ್ಕಿ ಹ್ಯಾಲೆ

ನಿರ್ದೇಶಕ ಸಂದೀಪ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಪ್ರೇಕ್ಷಕರನ್ನ ಬೇರೆ ಎದ್ದೆ ದಿಕ್ಕಿನಲ್ಲಿ ರಂಜಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಬರುವ ರೋಚಕತ್ತಿರುವಗಳು ಹಾಕಿರುವ ಗಳಿಗೆ ಭಾವನಾತ್ಮಕ ಸಂಬಂಧಗಳು ಎಲ್ಲವೂ ಮಿಳಿತವಾಗಿ, ನೋಡುವ ಮನಸುಗಳಿಗೆ ಎಲ್ಲಾ ರೀತಿಯ ರಸಾನುಭವ ಉಂಟಾಗುತ್ತದೆ. ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ನಾಜೂಕಾಗಿ ಹೇಳುವ ಪ್ರಯತ್ನ ಆಗಿದೆ. ಮೋಸಕ್ಕೆ ಎಂದೂ ಜಯವಿಲ್ಲ ಎನ್ನುವುದನ್ನು ಕೊನೆಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಒಟ್ಟಾರೆ ಕಥೆ ಹಾಗೂ ತಾಂತ್ರಿಕವಾಗಿ ಗಮನ ಸೆಳೆಯಲಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ

RELATED ARTICLES

Latest News