Saturday, April 13, 2024
Homeರಾಜ್ಯರಾಜ್ಯಸಭೆ ಸದಸ್ಯತ್ವದಿಂದ ಹನುಮಂತಯ್ಯ, ರಾಜೀವ್ ಚಂದ್ರಶೇಖರ್ ನಿವೃತ್ತಿ

ರಾಜ್ಯಸಭೆ ಸದಸ್ಯತ್ವದಿಂದ ಹನುಮಂತಯ್ಯ, ರಾಜೀವ್ ಚಂದ್ರಶೇಖರ್ ನಿವೃತ್ತಿ

ಬೆಂಗಳೂರು, ಏ.3- ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್, ಡಾ. ಎಲ್. ಹನುಮಂತಯ್ಯ, ಡಾ. ಸೈಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ನಿನ್ನೆ ನಿವೃತ್ತರಾಗಿದ್ದಾರೆ.

ಈ ನಾಲ್ವರು ಸದಸ್ಯರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಎಲ್. ಹನುಮಂತಯ್ಯ ಹಾಗೂ ರಾಜೀವ್ ಚಂದ್ರಶೇಖರ್ ಅವರು ಮರು ಸ್ಪರ್ಧೆಯಿಂದ ದೂರ ಉಳಿದಿದ್ದರು. ಆದರೆ ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಮರು ಸ್ಪರ್ಧೆ ಮಾಡಿ ಆಯ್ಕೆ ಯಾಗಿದ್ದಾರೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಕಾನ್, ಡಾ. ಸೈಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್, ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಚುನಾಯಿತರಾಗಿದ್ದಾರೆ.

RELATED ARTICLES

Latest News