Wednesday, May 1, 2024
Homeಕ್ರೀಡಾ ಸುದ್ದಿRCB ಟ್ರೋಫಿ ಗೆಲ್ಲದಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ

RCB ಟ್ರೋಫಿ ಗೆಲ್ಲದಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ

ಬೆಂಗಳೂರು, ಏ.3- ವಿಶ್ವದ ಅತ್ಯಂತ ಐಷಾರಾಮಿ ಕ್ರಿಕೆಟ್ ಲೀಗ್ (ಐಪಿಎಲ್) ಟೂರ್ನಿಯ 16 ಸೀಸನ್ಗಳು ಕಳೆದಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಗೆಲ್ಲದೆ ಇರಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 28 ರನ್ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಯುವ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಅಂಬಾಟಿ ರಾಯುಡು ಅವರು ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲದೆ ಇರಲು ವಿರಾಟ್ ಕೊಹ್ಲಿಯೇ ನೇರ ಕಾರಣ ಎಂದು ಅಂಬಾಟಿ ರಾಯುಡು ಹೊಸ ಬಾಂಬ್ ಸಿಡಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಬಲಿಷ್ಠ ತಂಡವಗಿರುವ ಆರ್ಸಿಬಿ ಟ್ರೋಫಿ ಗೆಲ್ಲದೆ ಇರಲು ಆ ತಂಡವು 2008 ರಿಂದಲೂ ಟಾಪ್ ಆರ್ಡರ್ ಬ್ಯಾಟರ್ಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಹಾಗೂ ಬೌಲರ್ಗಳ ವೈಫಲ್ಯತೆ ಕಾರಣ ಎಂದು ತಿಳಿದಿದ್ದರೂ, ಬೆಂಗಳೂರು ಫ್ರಾಂಚೈಸಿ ಚಾಂಪಿಯನ್ ಪಟ್ಟ ಗೆಲ್ಲದೇ ಇರಲು ಕೊಹ್ಲಿಯನ್ನು ಹೊಣೆ ಮಾಡಿದ್ದಾರೆ.

`ವಿರಾಟ್ ಕೊಹ್ಲಿ ಅವರು ಆರ್ಸಿಬಿ ಫ್ರಾಂಚೈಸಿಯೊಂದಿಗೆ 2008 ರಿಂದಲೂ ಇದ್ದು ಆಟಗಾರ ಹಾಗೂ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಆದರೆ ಮೆಗಾ ಹರಾಜು ಹಾಗೂ ಮಿನಿ ಹರಾಜಿನಲ್ಲಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರನ್ನು ಖರೀದಿಸಲು ಹಾಗೂ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದ ಶೇನ್ ವಾಟ್ಸನ್ , ಯುಜ್ವೇಂದ್ರಚಹಲ್ ಸೇರಿದಂತೆ ಹಲವು ಆಟಗಾರರನ್ನು ಫ್ರಾಂಚೈಸಿ ಜೊತೆಗೆ ಸೂಕ್ತ ಮಾತುಕತೆ ನಡೆಸಿ ಉಳಿಸಿಕೊಳ್ಳುವಲ್ಲಿ ಎಡವಿದ್ದೆ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ’ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

` ವಿರಾಟ್ ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲಿ 7000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಆದರೆ ಈ ತಂಡದಿಂದ ಅತಿ ಹೆಚ್ಚು ರನ್ ಗಳಿಸಿದ ಬೇರೊಬ್ಬ ಆಟಗಾರರು ಇದ್ದಾರೆಯೇ. ಇದು ನಿಜಕ್ಕೂ ಫ್ರಾಂಚೈಸಿಗೆ ತುಂಬಾ ಕಠಿಣವಾಗಿದೆ. ಒಬ್ಬ ಆಟಗಾರನು ಉತ್ತಮ ಪ್ರದರ್ಶನ ತೋರುವುದರಿಂದ ಯಾವುದೇ ತಂಡ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ’ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.

2024ರ ಐಪಿಎಲ್ ಟೂರ್ನಿಯಲ್ಲೂ ಆರ್ಸಿಬಿಯ ಬಹುತೇಕ ಸ್ಟಾರ್ ಬ್ಯಾಟರ್ಸ್ಗಳು ರನ್ ವೈಫಲ್ಯ ಎದುರಿಸಿರುವ ನಡುವೆಯೂ ವಿರಾಟ್ ಕೊಹ್ಲಿ 203 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

RELATED ARTICLES

Latest News