Friday, October 11, 2024
Homeಕ್ರೀಡಾ ಸುದ್ದಿ | Sportsಕೊಹ್ಲಿ, ಧೋನಿ ದಾಖಲೆ ಮುರಿದ ಇಂಗ್ಲೆಂಡ್‌ ನಾಯಕ ಬ್ರೂಕ್

ಕೊಹ್ಲಿ, ಧೋನಿ ದಾಖಲೆ ಮುರಿದ ಇಂಗ್ಲೆಂಡ್‌ ನಾಯಕ ಬ್ರೂಕ್

Harry Brook Breaks Virat Kohli's Elite Captaincy Record

ನವದೆಹಲಿ, ಸೆ. 30– ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ 49 ರನ್‌ಗಳಿಂದ ಸೋತು ಸರಣಿಯನ್ನು 3-2 ರಿಂದ ಕಳೆದುಕೊಂಡರೂ ಆಂಗ್ಲ ನಾಯಕ ಹ್ಯಾರಿ ಬ್ರೂಕ್‌ ಟೀಮ್‌ ಇಂಡಿಯಾದ ಮಾಜಿ ನಾಯಕರಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ಕೊಹ್ಲಿ ಅವರ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

ಐದು ಪಂದ್ಯಗಳ ಏಕದಿನ ಸರಣಿಯುದ್ದಕ್ಕೂ ವಿಧ್ವಂಸಕ ಬ್ಯಾಟಿಂಗ್‌ ನಡೆಸಿದ ಹ್ಯಾರಿ ಬ್ರೂಕ್‌ ಭಾನುವಾರ ಬ್ರಿಸ್ಟ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲೂ 52 ಎಸೆತಗಳನ್ನು ಎದುರಿಸಿ 3 ಮನಮೋಹಕ ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳಿಂದ 72 ರನ್‌ ಸಿಡಿಸಿ ತಂಡ 308 ರನ್‌ ಗಳಿಸಲು ಬಲ ತುಂಬಿದ್ದರು.

ಇತಿಹಾಸ ನಿರ್ಮಿಸಿದ ಹ್ಯಾರಿಬ್ರೂಕ್:
ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 312 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದ ಹ್ಯಾರಿ ಬ್ರೂಕ್‌, ಕ್ಲಾಸ್‌‍ ಆಟಗಾರ ವಿರಾಟ್‌ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

ಆಸೆ್ಟ್ರೕಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್:

  • 312 ರನ್‌- ಹ್ಯಾರಿ ಬ್ರೂಕ್‌- ಇಂಗ್ಲೆಂಡ್- 2024
  • 310 ರನ್‌- ವಿರಾಟ್‌ಕೊಹ್ಲಿ- ಭಾರತ- 2019
  • 285 ರನ್‌- ಮಹೇಂದ್ರ ಸಿಂಗ್‌ ಧೋನಿ- ಭಾರತ- 2009
  • 278 ರನ್‌- ಐಯಾನ್‌ ಮಾರ್ಗನ್‌- ಇಂಗ್ಲೆಂಡ್- 2015
  • 276 ರನ್‌- ಬಾಬರ್‌ ಆಝಮ್‌- ಪಾಕಿಸ್ತಾನ – 2022

ನಾಯಕನಾಗಿಯೂ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಬರೆದ ಹ್ಯಾರಿ ಬ್ರೂಕ್‌, ಇಂಗ್ಲೆಂಡ್‌ ಪರ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. 2010-2011 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ 7 ಪಂದ್ಯಗಳ ಏಕದಿನ ಸರಣಿಯಲ್ಲಿ ಜಾನಥನ್‌ ಥ್ರಾಟ್‌ 375 ರನ್‌ ಗಳಿಸಿರುವುದು ದಾಖಲೆಯಾಗಿದೆ.

RELATED ARTICLES

Latest News