Friday, May 17, 2024
Homeಜಿಲ್ಲಾ ಸುದ್ದಿಗಳುಹಾಸನ ಪೆನ್‌ಡ್ರೈವ್‌ ಪ್ರಕರಣ : ಎಸ್‌ಐಟಿ ತಂಡಕ್ಕೆ ಅಧಿಕಾರಿಗಳ ನೇಮಕ

ಹಾಸನ ಪೆನ್‌ಡ್ರೈವ್‌ ಪ್ರಕರಣ : ಎಸ್‌ಐಟಿ ತಂಡಕ್ಕೆ ಅಧಿಕಾರಿಗಳ ನೇಮಕ

ಹಾಸನ, ಏ.30- ಇಡೀ ರಾಜ್ಯವೇ ಹಾಸನದತ್ತ ತಿರುಗಿ ನೋಡುವಂತಹ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ತಂಡಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಬಿ.ಕೆ. ಸಿಂಗ್‌, ಸುಮನ್‌ ಡಿ ಪನ್ನೇಕರ್‌ ಹಾಗೂ ಸೀಮಾ ಲಾಟ್ಕರ್‌ ಅವರ ನೇತೃತ್ವದ ತಂಡಕ್ಕೆ ಒಟ್ಟು 18 ಮಂದಿ ಅಧಿಕಾರಿಗಳನ್ನು ನೇಮಿಸಿ ಪೊಲೀಸ್‌ ಇಲಾಖೆ ಆದೇಶಿಸಿದೆ.

ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಮೂವರು ಎಸಿಪಿ ಮಟ್ಟದ ಅಧಿಕಾರಿಗಳು, ಮೂವರು ಮಹಿಳಾ ಇನ್‌ಸ್ಪೆಕ್ಟರ್‌ಗಳು ಸೇರಿ ಐದು ಮಂದಿ ಇನ್‌ಸ್ಪೆಕ್ಟರ್‌ಗಳನ್ನು ಹಾಗೂ ಮೂವರು ಮಹಿಳಾ ಪಿಎಸ್‌ಐ ಸೇರಿ ನಾಲ್ವರು ಪಿಎಸ್‌ಐಗಳು, ನಾಲ್ವರು ಹೆಡ್‌ಕಾನ್‌ಸ್ಟೇಬಲ್‌ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಲಾಗಿದೆ.

ಒಟ್ಟಾರೆ ರಾಜ್ಯದ ವಿವಿಧ ಜಿಲ್ಲೆಗಳ ನುರಿತ ಅಧಿಕಾರಿಗಳನ್ನು ಆಯ್ಕೆ ಮಾಡಿ ಪ್ರಕರಣದ ತನಿಖೆಗಾಗಿ ಬಿಲಿಷ್ಠ ತಂಡವನ್ನು ಸಜ್ಜು ಮಾಡಲಾಗಿದೆ. ಎಸ್‌ಐಟಿ ತಂಡಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ತಂಡದ ಮುಖ್ಯಸ್ಥ ಬಿ.ಕೆ. ಸಿಂಗ್‌ ಅವರಲ್ಲಿ ವರದಿ ಮಾಡಿಕೊಂಡರು.ಒಟ್ಟಾರೆ ಪ್ರಕರಣದ ತನಿಖೆಗೆ ಸ್ಟ್ರಾಂಗ್‌ ಟೀಮ್‌ ಸಜ್ಜಾಗಿದ್ದು ತನಿಖೆ ಆರಂಭಗೊಂಡಿದೆ.

RELATED ARTICLES

Latest News