Homeಆರೋಗ್ಯ / ಜೀವನಶೈಲಿಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ, ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ, ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ ಕ್ಷೇತ್ರಕ್ಕೆ ಮಾತ್ರವಲ್ಲ, ಅತ್ಯುತ್ತಮ ವೈದ್ಯಕೀಯ ಸೇವೆಗಳಿಗೂ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಹಲ್ಲಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್‌ನ 42 ವರ್ಷದ ಜಾನ್ ಮಿಲ್ಲರ್ ಎಂಬುವವರು, ಬರೋಬ್ಬರಿ 8,000 ಕಿಲೋಮೀಟರ್ ಪ್ರಯಾಣಿಸಿ ಬೆಂಗಳೂರಿಗೆ ಬಂದು ಯಶಸ್ವಿ ಚಿಕಿತ್ಸೆ ಪಡೆದು ಮರಳಿದ್ದಾರೆ.

ಸಮಸ್ಯೆ ಏನಾಗಿತ್ತು? ಬೆಂಗಳೂರಿಗೆ ಬಂದಿದ್ದೇಕೆ? ಜಾನ್ ಮಿಲ್ಲರ್ ಅವರು, ತಮ್ಮ ಮುಂಭಾಗದ ಮೇಲಿನ ಹಲ್ಲುಗಳ ಸುತ್ತ ಬೆಳೆದಿದ್ದ ‘ಸಿಸ್ಟ್’ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಅವರ ದವಡೆಯ ಮೂಳೆಗಳು ದುರ್ಬಲಗೊಂಡು, ದಿನನಿತ್ಯದ ಊಟ ಮಾಡಲು ಮತ್ತು ಮಾತನಾಡಲೂ ಕಷ್ಟಪಡುತ್ತಿದ್ದರು. ಗುಣಮಟ್ಟದ, ಸುಧಾರಿತ ಹಾಗೂ ಕೈಗೆಟುಕುವ ದರದ ಚಿಕಿತ್ಸೆಗಾಗಿ ಹುಡುಕಾಟ ನಡೆಸಿದಾಗ ಅವರಿಗೆ ಬೆಂಗಳೂರಿನ ‘ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್’ ಬಗ್ಗೆ ಮಾಹಿತಿ ಲಭ್ಯವಾಯಿತು. ಸಂಕೀರ್ಣವಾದ ಹಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಕ್ಲಿನಿಕ್ ಹೊಂದಿರುವ ಜನಪ್ರಿಯತೆಯನ್ನು ನೋಡಿ ಅವರು ಲಂಡನ್‌ನಿಂದ ಇಲ್ಲಿಗೆ ಬರಲು ನಿರ್ಧರಿಸಿದರು.

6 ವಾರಗಳ ಕಾಲ ಅತ್ಯಾಧುನಿಕ ಚಿಕಿತ್ಸೆ : ಕ್ಲಿನಿಕ್‌ನ ಉಪನಿರ್ದೇಶಕರಾದ ಡಾ. ಸ್ಯಾಮ್ಯುಯೆಲ್ ಶಾಡ್ರಾಕ್ ಸುರೇಂದರ್ ಅವರ ನೇತೃತ್ವದಲ್ಲಿ ಚಿಕಿತ್ಸೆ ಆರಂಭವಾಯಿತು. ಸುಮಾರು ಒಂದೂವರೆ ತಿಂಗಳು (6 ವಾರಗಳು) ನಡೆದ ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಹಂತ-ಹಂತವಾಗಿ ಮಾಡಲಾಯಿತು.

ಮೊದಲಿಗೆ ಹಲ್ಲುಗಳ ಸುತ್ತಲಿದ್ದ ಸಿಸ್ಟ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಯಿತು. ನಂತರ ದುರ್ಬಲಗೊಂಡಿದ್ದ ದವಡೆಯ ಭಾಗವನ್ನು ಬಲಪಡಿಸಲು ಪ್ರಾಣಿಗಳ (Bovine) ಮೂಳೆಯ ಅಂಶವನ್ನು ಬಳಸಿ ‘ಬೋನ್ ಗ್ರಾಫ್ಟಿಂಗ್’ (Bone grafting) ಮಾಡಲಾಯಿತು.

ಯಾವುದೇ ಸೋಂಕು ಹರಡದಂತೆ ತಡೆಯಲು ‘ರೂಟ್ ಕೆನಾಲ್’ ಚಿಕಿತ್ಸೆ ನೀಡಲಾಯಿತು. ಅಂತಿಮವಾಗಿ, ಹಲ್ಲುಗಳು ನೈಸರ್ಗಿಕವಾಗಿ ಹಾಗೂ ಸುಂದರವಾಗಿ ಕಾಣಲು ಕಸ್ಟಮೈಸ್ ಮಾಡಿದ ‘ಜಿರ್ಕೋನಿಯಾ ಕ್ರೌನ್‌’ಗಳನ್ನು (Zirconia crowns) ಅಳವಡಿಸಲಾಯಿತು.

“ಇದೊಂದು ಸಂಕೀರ್ಣವಾದ ಪ್ರಕರಣವಾಗಿತ್ತು. ಸಿಸ್ಟ್ ತೆಗೆಯುವುದರ ಜೊತೆಗೆ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡುವುದು ಮತ್ತು ಬಾಯಿಯ ಸಹಜ ಚಲನೆಯನ್ನು ಮರಳಿ ತರುವುದು ನಮ್ಮ ಮುಂದಿದ್ದ ಸವಾಲಾಗಿತ್ತು. ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿ, ಆತ್ಮವಿಶ್ವಾಸದಿಂದ ತಮ್ಮ ದೈನಂದಿನ ಕೆಲಸಗಳಿಗೆ ಮರಳಿರುವುದು ನಮಗೆ ಅತ್ಯಂತ ಸಂತಸ ತಂದಿದೆ,” ಎಂದು ಡಾ. ಸ್ಯಾಮ್ಯುಯೆಲ್ ತಿಳಿಸಿದ್ದಾರೆ.

ಸಂತಸ ಹಂಚಿಕೊಂಡ ರೋಗಿ : “ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬರುವುದು ಒಂದು ದೊಡ್ಡ ನಿರ್ಧಾರವಾಗಿತ್ತು. ಆದರೆ ಅದು ಸರಿಯಾದ ನಿರ್ಧಾರ ಎಂದು ಈಗ ಸಾಬೀತಾಗಿದೆ. ಹ್ಯಾಪಿಯೆಸ್ಟ್ ಪರ್ಲ್ಸ್‌ನಲ್ಲಿ ನನಗೆ ಸಿಕ್ಕಿ ಕಾಳಜಿ ಮತ್ತು ಬೆಂಬಲ ಅಸಾಧಾರಣವಾಗಿತ್ತು. ಡಾ. ಸ್ಯಾಮ್ಯುಯೆಲ್ ಹಾಗೂ ಹಲ್ಲುಗಳನ್ನು ಸ್ವಚ್ಛಗೊಳಿಸಿ ಬೆಳ್ಳಗಾಗಿಸಿದ ಡಾ. ಸಾರಾ ಐಸಾಕ್ ಮತ್ತು ಇಡೀ ನರ್ಸಿಂಗ್ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ಈಗ ನಾನು ಆರಾಮಾಗಿ ಮಾತನಾಡಬಲ್ಲೆ, ಊಟ ಮಾಡಬಲ್ಲೆ ಮತ್ತು ನಗಬಲ್ಲೆ,” ಜಾನ್ ಮಿಲ್ಲರ್ ಸಂತಸ ಹಂಚಿಕೊಂಡಿದ್ದಾರೆ.

ಖ್ಯಾತ ಉದ್ಯಮಿ ಅಶೋಕ್ ಸೂಟಾ ಅವರು ಸ್ಥಾಪಿಸಿರುವ ‘ಹ್ಯಾಪಿಯೆಸ್ಟ್ ಹೆಲ್ತ್ʼ ವಿನೂತನ ಮಾದರಿಯಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. ದಂತ ಚಿಕಿತ್ಸೆ, ಆಯುರ್ವೇದ, ಫಿಸಿಯೋಥೆರಪಿ ಸೇರಿದಂತೆ ಹಲವು ವಿಭಾಗಗಳಲ್ಲಿ ಸೇವೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ನರರೋಗ, ಹೃದ್ರೋಗ, ಸ್ತ್ರೀರೋಗ, ಮಕ್ಕಳ ಕಾಯಿಲೆ ಸೇರಿದಂತೆ ಇನ್ನಷ್ಟು ಸುಧಾರಿತ ಚಿಕಿತ್ಸಾ ವಿಭಾಗಗಳನ್ನೂ ಆರಂಭಿಸಲಿದೆ.

RELATED ARTICLES

Latest News