Monday, September 16, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಾರ್ಮುಡಿ ಘಾಟಿಯಲ್ಲಿ ಧಾರಾಕಾರ ಮಳೆ, ಪ್ರಯಾಣಿಕರು ಕಂಗಾಲು

ಚಾರ್ಮುಡಿ ಘಾಟಿಯಲ್ಲಿ ಧಾರಾಕಾರ ಮಳೆ, ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು,ಆ.21– ಚಾರ್ಮುಡಿ ಘಾಟಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿಯುತ್ತಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿಯಲ್ಲಿ ಮಳೆ ಬೀಳುತ್ತಿದ್ದು ಧಾರಾಕಾರ ಮಳೆ ಅಬ್ಬರಕ್ಕೆ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಯಲ್ಲಿ ಕಾಣದಂತ ರಣ ಮಳೆಯಾಗಿದ್ದು ರಸ್ತೆಯಲ್ಲಿ 2 ಅಡಿ ನೀರು ಹರಿಯುತ್ತಿದೆ.ಮಳೆ ಹಾಗೂ ಮಳೆ ನೀರಿನ ಮಧ್ಯೆ ವಾಹನ ಚಲಾಯಿಸುವುದು ಚಾಲಕರಿಗೆ ಸವಾಲಾಗಿದೆ.

ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಕೆಸರು ಮಿಶ್ರಿತ ನೀರಿನಿಂದ ರಸ್ತೆಯೇ ಕಾಣದಂತಾಗಿದೆ.ಹೋಗಿ-ಬರುತ್ತಿರುವ ವಾಹನಗಳ ಚಾಲಕರು ಬೆಳ್ತಂಗಡಿ-ಕೊಟ್ಟಿಗೆಹಾರದಲ್ಲಿ ಚಾಲಕರಿಗೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News