Friday, May 3, 2024
Homeರಾಷ್ಟ್ರೀಯಸಂಸತ್ತಿನಲ್ಲಿ ಸೊರೆನ್ ಬಂಧನ ವಿಷಯ ಪ್ರಸ್ತಾಪಿಸಲು ಇಂಡಿಯಾ ಒಕ್ಕೂಟ ನಿರ್ಧಾರ

ಸಂಸತ್ತಿನಲ್ಲಿ ಸೊರೆನ್ ಬಂಧನ ವಿಷಯ ಪ್ರಸ್ತಾಪಿಸಲು ಇಂಡಿಯಾ ಒಕ್ಕೂಟ ನಿರ್ಧಾರ

ನವದೆಹಲಿ, ಫೆ 2 (ಪಿಟಿಐ) ಸಂಸತ್ತಿನ ಉಭಯ ಸದನಗಳಲ್ಲಿ ಜೆಎಂಎಂ ನಾಯಕ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನದ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಬಣ ನಿರ್ಧರಿಸಿದೆ. ಸಂಸತ್ ಭವನದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್‍ನಲ್ಲಿ ಇಂದು ಬೆಳಗ್ಗೆ ನಡೆದ ಇಂಡಿಯಾ ಒಕ್ಕೂಟದ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜ. 31 ರಂದು ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ತಮ್ಮ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ನಾಯಕರು ಭೇಟಿಯಾಗುತ್ತಿರುವುದು ಇದೇ ಮೊದಲು. ಜಾರಿ ನಿರ್ದೇಶನಾಲಯವು ಸೋರೆನ್ ಅವರನ್ನು ಬಂಧಿಸಿರುವುದು ಮತ್ತು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಲ್ಲಿ ವಿಳಂಬವನ್ನು ಪ್ರತಿಪಕ್ಷ ನಾಯಕರು ಟೀಕಿಸಿದ್ದಾರೆ.

2047ರ ವೇಳೆಗೆ ಭಾರತ ಮುಂದುವರೆದ ರಾಷ್ಟ್ರವಾಗಲಿದೆ : ಐಎಂಎಫ್

ಸೋರೆನ್ ಅವರನ್ನು ಇಡಿ ಬಂಧಿಸಿದ ದಿನದಂದು ಸೋನಿಯಾ ಗಾಂಧಿ, ಶರದ್ ಪವಾರ್ ಮತ್ತು ಟಿಆರ್ ಬಾಲು ಸೇರಿದಂತೆ ಪ್ರತಿಪಕ್ಷಗಳ ಉನ್ನತ ನಾಯಕರು ಈ ಹಿಂದೆ ಖರ್ಗೆ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಸೋರೆನ್ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು ಮತ್ತು ಹೊಸ ಸರ್ಕಾರ ರಚನೆ ವಿಳಂಬವಾಯಿತು ಎಂದು ಅವರು ಆರೋಪಿಸುತ್ತಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬುಧವಾರ ರಾತ್ರಿ ಸೋರೆನ್ ಅವರನ್ನು ಬಂಧಿಸಲಾಗಿದೆ.

RELATED ARTICLES

Latest News