Sunday, July 21, 2024
Homeರಾಷ್ಟ್ರೀಯಹಿಮಾಚಲ ಪ್ರದೇಶದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ

ಹಿಮಾಚಲ ಪ್ರದೇಶದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ

ಶಿವ್ಲಾ, ಜು.10- ಹಿಮಾಚಲ ಪ್ರದೇಶದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ಉಪಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಅವರ ಪತ್ನಿ ಸೇರಿದಂತೆ 13 ಅಭ್ಯರ್ಥಿಗಳ ಭವಿಷ್ಯಮತದಾರರು ನಿರ್ಧಾರ ಮಾಡಲಿದ್ದಾರೆ.

ಡೆಹ್ರಾ, ಹಮೀರ್‌ಪುರ ಮತ್ತು ನಲಗಢದ ಮೂರು ವಿಧಾನಸಭಾ ಕ್ಷೇತ್ರಗಳ 315 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಮತಗಟ್ಟೆಗಳತ್ತ ಮಂದಿದ್ದು ,ಒಟ್ಟು 2,59,340 ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ.

ಕಳೆದ ಫೆ.27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ ಶಾಸಕರಾದ ಹೋಶಿಯಾರ್‌ ಸಿಂಗ್‌ (ಡೆಹ್ರಾ), ಆಶಿಶ್‌ ಶರ್ಮಾ (ಹಮೀರ್‌ರ್ಪು) ಮತ್ತು ಕೆಎಲ್‌ ಠಾಕೂರ್‌ (ನಲಗಢ) ಅವರು ಮಾರ್ಚ್‌ 22 ರಂದು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸ್ಥಾನಗಳು ಖಾಲಿಯಾದವು.

ಮರುದಿನ ಅವರು ಬಿಜೆಪಿಗೆ ಸೇರಿದರು ಆದರೆ ಅವರ ರಾಜೀನಾಮೆಗಳನ್ನು ಸ್ಪೀಕರ್‌ ಇತ್ತೀಚೆಗೆ ಜೂನ್‌ 3 ರಂದು ಅಂಗೀಕರಿಸಿದರು. ಬಿಜೆಪಿಯಿಂದಲೇ ಈಗ ಮೂವರು ಸ್ಪರ್ಧಾ ಕಣಕ್ಕಿಳಿಸಿದ್ದಾರೆ.

ಡೆಹ್ರಾದಿಂದ ಮುಖ್ಯಮಂತ್ರಿಯವರ ಪತ್ನಿ ಕಮಲೇಶ್‌ ಠಾಕೂರ್‌ ಅವರನ್ನು ಕಾಂಗ್ರೆಸ್‌‍ ಕಣಕ್ಕಿಳಿಸಿದೆ, ಹಮೀರ್‌ಪುರದಿಂದ ತನ್ನ ಅಭ್ಯರ್ಥಿ ಪುಷ್ಪಿಂದರ್‌ ವರ್ಮಾ ಅವರನ್ನು ಪುನರುಚ್ಚರಿಸಿದೆ ಮತ್ತು ಹಿಮಾಚಲ ಘಟಕದ ಐದು ಬಾರಿ ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌‍ ಅಧ್ಯಕ್ಷ ಹರ್ದೀಪ್‌ ಸಿಂಗ್‌ ಬಾಬಾ ಅವರಿಗೆ ನಲಗಢದಿಂದ ಸ್ಪರ್ಧಿಸಿದ್ದು ,ಜುಲೈ 13 ರಂದು ಫಲಿತಾಂಶವನ್ನು ಪ್ರಕಟವಾಗಲಿದೆ.ಇದು ಸರ್ಕಾರ ಉಳಿಯುವುದೂ ಇಲ್ಲವೂ ಎಂಬುದು ಕೂಡ ತಿಳಿಯಲಿದೆ.

RELATED ARTICLES

Latest News