Wednesday, December 4, 2024
Homeರಾಷ್ಟ್ರೀಯ | Nationalಶಾಸ್ತ್ರೋಕ್ತವಲ್ಲದ ವಿವಾಹ ಅಸಿಂಧು

ಶಾಸ್ತ್ರೋಕ್ತವಲ್ಲದ ವಿವಾಹ ಅಸಿಂಧು

ಅಲಹಾಬಾದ್,ಅ.5-ಸಪ್ತಪದಿ ಹಾಗೂ ಇತರೆ ವಿವಿಧಾನಗಳಿಲ್ಲದ ಹಿಂದೂ ವಿವಾಹವೂ ಕಾನೂನು ಪ್ರಕಾರ ಸಿಂಧುವಾಗುವುದಿಲ್ಲ ಎಂದು ಅಲಹಾಬಾದ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನಿಂದ ದೂರವಾಗಿರುವ ಪತ್ನಿ, ತನಗೆ ವಿಚ್ಚೇದನ ನೀಡದೆ ಶಾಸ್ತ್ರೋಕ್ತವಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾಳೆ ಎಂದು ಸತ್ಯಂ ಎಂಬುವರು ಆರೋಪಿಸಿರುವ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಶಾಸ್ತ್ರೋಕ್ತ ಎಂಬ ಪದವು ಮದುವೆ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಮಾಡಬೇಕಾದ ಹಾಗೂ ಸೂಕ್ತ ಆಚರಣೆಗಳೊಂದಿಗೆ ಮದುವೆಯನ್ನು ಆಚರಿಸುವುದು ಎಂದು ಇದರ ಅರ್ಥ. ಮದುವೆಯನ್ನು ಸಮರ್ಪಕ ಸಮಾರಂಭಗಳು ಹಾಗೂ ಆಚರಣಾ ಪದ್ಧತಿಗಳೊಂದಿಗೆ ನೆರವೇರಿಸದೆ ಅಥವಾ ಆಚರಿಸದೆ ಹೋದರೆ ಅದನ್ನು ಶಾಸ್ತ್ರೋಕ್ತ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಹಿಂದೂ ಕಾನೂನಿನಲ್ಲಿ ಸಪ್ತಪದಿಯು ಮಾನ್ಯವಾದ ಮದುವೆಯನ್ನು ಪ್ರತಿಪಾದಿಸಲು ಅತಿ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಆದರೆ ಈ ಹಾಲಿ ಪ್ರಕರಣದಲ್ಲಿ ಅದರ ಪುರಾವೆಯೇ ಇಲ್ಲ. ಮದುವೆಯು ಮಾನ್ಯವಾದ ವಿವಾಹವಲ್ಲದಿದ್ದರೆ, ಅನ್ವಯವಾಗುವ ಕಾನೂನಿನ ಪ್ರಕಾರ ಅದು ಮದುವೆಯೇ ಅಲ್ಲ ಎಂದಿದ್ದಾರೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 7ರ ಮೇಲೆ ಅವಲಂಬಿತವಾಗಿದೆ. ಇದು ಹಿಂದೂ ವಿವಾಹವನ್ನು ಯಾವುದೇ ಪಕ್ಷಗಳ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳುತ್ತದೆ. ಎರಡನೆಯದಾಗಿ ಅಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ ಸಪ್ತಪದಿ (ಬೆಂಕಿಯ ಸುತ್ತಲೂ ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ಹಾಕುವುದು) ಸೇರಿದೆ, ಇದು ಏಳನೇ ಹೆಜ್ಜೆ ಇಟ್ಟಾಗ ಮದುವೆ ಪೂರ್ಣಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಏಪ್ರಿಲ್ 21, 2022 ರ ಸಮನ್ಸ್ ಆದೇಶವನ್ನು ರದ್ದುಗೊಳಿಸುವಾಗ ಮತ್ತು ಪತ್ನಿ, ಅರ್ಜಿದಾರರ ವಿರುದ್ಧ ಮಿಜರ್ ಪುರ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ದೂರಿನ ಪ್ರಕರಣದ ಮುಂದಿನ ಪ್ರಕ್ರಿಯೆಗಳನ್ನು ರದ್ದುಗೊಳಿಸುವಾಗ ನ್ಯಾಯಾಲಯವು ಸಪ್ತಪದಿಗೆ ಸಂಬಂಧಿಸಿದಂತೆ ದೂರಿನಲ್ಲಿ ಮತ್ತು ನ್ಯಾಯಾಲಯದ ಮುಂದೆ ಹೇಳಿಕೆಗಳಲ್ಲಿ ದೂರಿನಲ್ಲಿ ಯಾವುದೇ ತಕರಾರಿಲ್ಲ. ಆದ್ದರಿಂದ ಈ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಹೊರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

RELATED ARTICLES

Latest News