ಬೆಂಗಳೂರು, ಮಾ.18- ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದನ್ನು
ಪ್ರಶ್ನಿಸಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಮೂವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಲೇಮಾನ್, ಶನವಾಜ್ ಮತ್ತು ರೋಹಿತ್ ಬಂಧಿತರು. ಉಳಿದವರಿಗಾಗಿ ಶೋಧ ಮುಂದುವರೆದಿದೆ.
ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಮುಖೇಶ್ ಎಂಬುವರು ಮೊಬೈಲ್ ಬಿಡಿ ಭಾಗಗಳ ಅಂಗಡಿ ಇಟ್ಟುಕೊಂಡಿದ್ದಾರೆ.
ಇಲ್ಲಿನ ಪ್ರಾರ್ಥನಾ ಮಂದಿರದ 200 ಮೀಟರ್ ದೂರದಲ್ಲಿ ಮುಖೇಶ್ ಅವರ ಅಂಗಡಿ ಇದೆ. ನಿನ್ನೆ ಸಂಜೆ 7.30ರ ಸುಮಾರಿನಲ್ಲಿ ತಮ್ಮ ಅಂಗಡಿಯಲ್ಲಿ ಹಿಂದಿ ಭಜನೆ ಹಾಡು ಹಾಕಿದ್ದರು. ಇದರಿಂದ ಕೋಪಗೊಂಡ ಅನ್ಯಕೋಮಿನ ಆರೇಳು ಮಂದಿಯ ಗುಂಪು ಏಕಾಏಕಿ ಅಂಗಡಿ ಬಳಿ ಹೋಗಿ ನಿಮ್ಮ ಅಂಗಡಿಯಲ್ಲಿ ಹಾಕಿರುವ ಹಾಡಿನಿಂದ ಪ್ರಾರ್ಥನೆ ನಡೆಸಲು ತೊಂದರೆಯಾಗುತ್ತಿದೆ ಹಾಡನ್ನು ನಿಲ್ಲಿಸುವಂತೆ ಹೇಳಿ ಜಗಳವಾಡಿದ್ದಾರೆ.
ಮಾತಿಗೆ ಮಾತು ಬೆಳೆದಾಗ ಗಲಾಟೆ ವಿಕೋಪಕ್ಕೆ ತಿರುಗಿ ಮುಖೇಶ್ ಅವರನ್ನು ಅಂಗಡಿಯಿಂದ ಹೊರಗೆಳೆದು ಕೈ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಗಂಪು ಪರಾರಿಯಾಗಿದೆ.
ಪ್ರಧಾನಿ ಮೋದಿ ಭಾಷಣವನ್ನು ಕನ್ನಡದಲ್ಲೇ ಕೇಳಿಸಲು AI ಮೊರೆ ಹೋದ ಬಿಜೆಪಿ
ಘಟನೆಯನ್ನು ಖಂಡಿಸಿ ವರ್ತಕರು ಠಾಣೆ ಮುಂದೆ ಜಮಾಯಿಸಿ ಹಲ್ಲೆ ಮಾಡಿದ ಪುಂಡರನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿದರು. ಕಳೆದ 15 ದಿನಗಳಿಂದಲೂ ಅಂಗಡಿ ಬಳಿ ಬಂದು ಕೆಲ ಪುಂಡರು ಕಿರುಕುಳ ನೀಡುತ್ತಿದ್ದಾರೆಂದು ವರ್ತಕರು ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂಗಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಹಲ್ಲೆ ನಡೆಸಿದ ಮೂವರನ್ನು ಬಂಸಿ ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.