Sunday, October 6, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ಕೋಡ್‌

ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ಕೋಡ್‌

Horanadu Annapoorneshwari temple Dress Code

ಚಿಕ್ಕಮಗಳೂರು, ಸೆ.21- ಜಿಲ್ಲೆಯ ಶೃಂಗೇರಿ ಬಳಿಕ ಈಗ ಹೊರನಾಡಲ್ಲೂ ಡ್ರೆಸ್‌ ಕೋಡ್‌ ಜಾರಿಗೆ ಬಂದಿದೆ.ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ.ಗಂಡಸರು ಶಲ್ಯ, ಪ್ಯಾಂಟ್‌‍, ಪಂಚೆ,ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ಸೂಚನೆ ನೀಡಲಾಗಿದೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ಭಕ್ತರು ಸಹಕರಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.

ಇತ್ತೀಚೆಗೆ ತುಂಡುಡುಗೆ ಧರಿಸಿ ಬರುವವರ ಸಂಖ್ಯೆ ಅಧಿ ಕವಾಗಿದ್ದು, ಇದರಿಂದ ಸಾಕಷ್ಟು ಭಕ್ತರು ಮುಜುಗರ ಪಡುವಂತಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿ ಈ ಕ್ರಮ ತೆಗೆದುಕೊಂಡಿದೆ.

RELATED ARTICLES

Latest News