Wednesday, December 3, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2025)

Today's Horoscope

ನಿತ್ಯ ನೀತಿ : `ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು. ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?’ -ದ.ರಾ.ಬೇಂದ್ರೆ

ಪಂಚಾಂಗ : ಬುಧವಾರ, 03-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಭರಣಿ / ಯೋಗ: ಪರಿಘ / ಕರಣ: ಗರಜ
ಸೂರ್ಯೋದಯ – ಬೆ.06.27
ಸೂರ್ಯಾಸ್ತ – 5.52
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಮಯ ವ್ಯರ್ಥವಾಗಲಿದೆ.
ವೃಷಭ: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂ ಅನಾರೋಗ್ಯ ಕಾಡಬಹುದು.
ಮಿಥುನ: ಕಾನೂನು ವ್ಯವಹಾರಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ. ದೂರ ಪ್ರಯಾಣ ಮಾಡುವಿರಿ.

ಕಟಕ: ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ.
ಸಿಂಹ:ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಕನ್ಯಾ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.

ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪಠ್ಯದ ವಿಚಾರಕ್ಕಿಂತ ಪಠ್ಯೇತರ ವಿಚಾರದಲ್ಲಿ ಆಸಕ್ತಿ ಮೂಡಲಿದೆ.
ಧನುಸ್ಸು: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು, ಬಂಧುಗಳು ನೀಡುವ ಸಲಹೆ-ಸೂಚನೆಗಳಿಂದ ದೂರವಾಗಲಿವೆ.

ಮಕರ: ಸ್ವ ಉದ್ಯೋಗಿ ಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ.
ಕುಂಭ: ಉನ್ನತ ಅ ಕಾರಿಗಳಿಗೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಮೀನ: ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮನದಲ್ಲಿರುವ ದುಗುಡ ನಿವಾರಿಸಿಕೊಳ್ಳಲು ಯತ್ನಿಸುವಿರಿ.

RELATED ARTICLES

Latest News