ನಿತ್ಯ ನೀತಿ : `ನೂರು ಸಾರಿ ಸೋತಿದ್ದರೇನಂತೆ? ನೂರೊಂದು ಸಾಲ ಬಿದ್ದಿದ್ದರೇನಂತೆ? ಸೋಲು- ಗೆಲುವಿಗೆ ಮೆಟ್ಟಿಲು ಬಿದ್ದರಲ್ಲವೆ ಮರಳಿ ಏಳುವುದು. ಬೀಳದಿದ್ದವನು ಎಂದೂ ಮೇಲೆದ್ದವನಲ್ಲ’. -ಕುವೆಂಪು
ಪಂಚಾಂಗ : ಶುಕ್ರವಾರ, 05-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಕೃಷ್ಣ / ತಿಥಿ: ಪ್ರತಿಪದಾ/ ನಕ್ಷತ್ರ: ರೋಹಿಣಿ / ಯೋಗ: ಸಿದ್ಧ / ಕರಣ: ಬಾಲವ
ಸೂರ್ಯೋದಯ – ಬೆ.06.28
ಸೂರ್ಯಾಸ್ತ – 5.52
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಸಮಾಧಾನದಿಂದ ವಿಚಾರ ವಿನಿಮಯ ಮಾಡಿಕೊಂಡರೆ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ.
ವೃಷಭ: ಆರ್ಥಿಕವಾಗಿ ಅನುಕೂಲಕರ ದಿನವಾಗಿದೆ.
ಮಿಥುನ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ.
ಕಟಕ: ಎಲ್ಲರಿಂದಲೂ ತಪ್ಪಾಗುವುದು ಸಹಜ. ಧೈರ್ಯವಾಗಿ ಮುನ್ನುಗ್ಗಬೇಕು.
ಸಿಂಹ: ಕೆಲಸಗಳು ಸರಾಗವಾಗಿ ನಡೆದು ಮನಸ್ಸು ನಿರಾಳವಾಗಲಿದೆ. ಉತ್ತಮ ದಿನ.
ಕನ್ಯಾ: ತಾಂತ್ರಿಕ ಕ್ಷೇತ್ರ ದವರಿಗೆ ಮೇಲಾಧಿಕಾರಿ ಗಳಿಂದ ಹೆಚ್ಚಿನ ಒತ್ತಡಗಳು ಎದುರಾಗಲಿವೆ.
ತುಲಾ: ಸ್ನೇಹಿತರು ಹಾಗೂ ನೆರೆಹೊರೆಯವರಿಂದ ಆರ್ಥಿಕವಾಗಿ ನೆರವು ದೊರೆಯಲಿದೆ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಬಹು ದಿನಗಳ ಕನಸು ನನಸಾಗಲಿದೆ.
ಧನುಸ್ಸು: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.
ಮಕರ: ಮಕ್ಕಳ ವಿಷಯದಲ್ಲಿ ಜಾಗ್ರತೆಯಿಂದಿರಿ. ಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ದೂರ ಪ್ರಯಾಣ ಮಾಡುವಿರಿ.
ಮೀನ: ಮೇಲಾಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯಲಿದೆ.
