ನಿತ್ಯ ನೀತಿ : ಅವರಂತೆ ಇವರಂತೆ ಹಾಗೇನಿಲ್ಲ, ನೀನು ನಿನ್ನಂತೆ ಇರು ಅದುವೇ ನಿನ್ನ ಗುರುತು.
ಪಂಚಾಂಗ : ಮಂಗಳವಾರ, 06-01-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಆಶ್ಲೇಷಾ / ಯೋಗ: ಪ್ರೀತಿ / ಕರಣ: ಬವ ಸೂರ್ಯೋದಯ – ಬೆ.06.44
ಸೂರ್ಯಾಸ್ತ – 6.07
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಮಹಿಳೆಯರಿಗೆ ಮೇಲಾ ಕಾರಿಗಳಿಂದ ಕಿರುಕುಳ. ಏಲಕ್ಕಿ ವ್ಯಾಪಾರಿಗಳಿಗೆ ಅಲ್ಪ ಲಾಭ.
ವೃಷಭ: ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ಮಿಥುನ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.
ಕಟಕ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಸಿಂಹ: ನೆರೆಹೊರೆ ಯವರೊಂದಿಗೆ ಕಲಹ ಉಂಟಾಗಲಿದೆ.
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ.
ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ವೃಶ್ಚಿಕ: ಯಶಸ್ಸು ಸಾ ಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.
ಧನುಸ್ಸು: ಸಂಗಾತಿಯೊಂದಿಗೆ ವಿನಾಕಾರಣ ಕಲಹ ಉಂಟಾಗ ಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.
ಮಕರ: ವೈದ್ಯವೃತ್ತಿಯಲ್ಲಿರುವವರು ಅ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಕುಂಭ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.
ಮೀನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.
