ನಿತ್ಯ ನೀತಿ : ಹಣ ಬಂದಾಗ ಹಣದ ಜೊತೆ ಗೌರವವೂ ಬರುತ್ತದೆ. ಆದರೆ ನೆನಪಿಡಿ, ಆ ಗೌರವ ಆ ಹಣಕ್ಕೆ ಸಿಕ್ಕಿದೆಯೇ ಹೊರತು ಆ ವ್ಯಕ್ತಿಗೆ ಅಲ್ಲ..! ಗೌರವ ಸಿಗಬೇಕೆಂದರೆ ಸದ್ಗುಣಗಳು ಇರಲೇಬೇಕು.
ಪಂಚಾಂಗ : ಭಾನುವಾರ, 14-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಹಸ್ತ / ಯೋಗ: ಸೌಭಾಗ್ಯ / ಕರಣ: ಬವಪೂರ್ಣ
ಸೂರ್ಯೋದಯ – ಬೆ.06.33
ಸೂರ್ಯಾಸ್ತ – 5.56
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಒತ್ತಡವಿದ್ದರೂ ಸಮಾಧಾನದಿಂದ ಕೆಲಸ-ಕಾರ್ಯ ಆರಂಭಿಸಲು ಪ್ರಯತ್ನಿಸುವಿರಿ.
ವೃಷಭ: ಮಕ್ಕಳಿಂದ ಅನುಕೂಲವಾಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.
ಮಿಥುನ: ಅಂದುಕೊಂಡ ಕೆಲಸಗಳು ಈಡೇರಲಿವೆ. ಬಂಧುಗಳಿಂದ ಸಹಾಯ ಸಿಗಲಿದೆ.
ಕಟಕ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭ ಗಳು ಬರಬಹುದು.
ಸಿಂಹ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ಕನ್ಯಾ: ಕಾರ್ಯನಿರ್ವ ಹಣೆಯಲ್ಲಿ ಉತ್ಸಾಹ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.
ತುಲಾ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ವೃಶ್ಚಿಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಧನುಸ್ಸು: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.
ಮಕರ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.
ಕುಂಭ: ಪೋಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಬಹಳ ಸೂಕ್ತ.
ಮೀನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.
